ಸಿದ್ಧರಾಮಯ್ಯರಿಗೆ ಇದು ಕೊನೆ ಚುನಾವಣೆ : ಗೌರವಯುತ ನಿವೃತ್ತಿಗೆ ಅವಕಾಶ ನೀಡಿ-ಡಾ.ಯತೀಂದ್ರ ಸಿದ್ಧರಾಮಯ್ಯ ಭಾವನಾತ್ಮಕ ನುಡಿ.

ಮೈಸೂರು,ಮೇ,3,2023(www.justkannada.in): ಸಿದ್ಧರಾಮಯ್ಯ ಅವರಿಗೆ ಇದು ಕೊನೆಯ ಚುನಾವಣೆ. ಹೀಗಾಗಿ ಗೌರವಯುತವಾಗಿ ಚುನಾವಣಾ ರಾಜಕೀಯದಿಂದ ನಿವೃತ್ತರಾಗಲು ಅವಕಾಶ ಮಾಡಿಕೊಡಿ ಎಂದು ವರುಣಾ ಕ್ಷೇತ್ರದ ಜನರಿಗೆ  ಶಾಸಕ ಡಾ.ಯತೀಂದ್ರ ಸಿದ್ಧರಾಮಯ್ಯ ಭಾವನಾತ್ಮಕವಾಗಿ ಮನವಿ ಮಾಡಿದರು.

ನಿನ್ನೆ ರಾತ್ರಿ ವರುಣ ಕ್ಷೇತ್ರದಲ್ಲಿ ರ್ಯಾಲಿ ವೇಳೆ ಮಾತನಾಡಿದ ಶಾಸಕ ಯತೀಂದ್ರ  ಬಡವರು ರೈತರು ಹಿಂದುಳಿದವರು ದಲಿತರು ಅಲ್ಪಸಂಖ್ಯಾತರಿಗಾಗಿ ಸಿದ್ಧರಾಮಯ್ಯ ಇಡೀ ಜೀವನ ಹೋರಾಟ ಮಾಡಿದ್ದಾರೆ. ಪಾಪ ಸಿದ್ದರಾಮಯ್ಯ ಅವರ ಕೊನೇ ಚುನಾವಣೆ ಇದು. ನಿಮ್ಮ ಕೈ ಮುಗಿದು ಬೇಡಿಕೊಳ್ಳುತ್ತೇನೆ. ಅವಕಾಶ ಮಾಡಿಕೊಡಿ ಎಂದರು.

ದಲಿತ ಬಡವರ ವಿರೋಧಿ ಬಿಜೆಪಿ ಪಕ್ಷ ಕಿತ್ತು ಬಿಸಾಕಿ. ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ. ಪೆಟ್ರೋಲ್, ಡೀಸೆಲ್ ಸಿಲಿಂಡರ್ ಬೆಲೆ ಜಾಸ್ತಿ ಆಗಿದೆ. ಬಡವರು ಬದುಕಲು ಕಷ್ಟವಾಗಿದೆ. ಬಿಜೆಪಿಯವರು ಬಡವರ ಜೀವನವನ್ನ ಕಷ್ಟ ಮಾಡಿದ್ದಾರೆ. ಬಿಜೆಪಿ ಬಡವರಿಗೆ ಸರ್ಕಾರದ ಹಣ ಖರ್ಚು ಮಾಡಲ್ಲ. ಉದ್ಯಮಿ ಶ್ರೀಮಂತರಿಗೆ ಸರ್ಕಾರದ ಹಣ ಖರ್ಚು ಮಾಡುತ್ತದೆ. ಅದಕ್ಕೆ ನಾವು ಬಡವರಿಗೆ ಗ್ಯಾರಂಟಿ ಯೋಜನೆ ನೀಡಿದ್ದೇವೆ. ಹಳ್ಳಿಗಳಲ್ಲಿ ಕರೆಂಟ್ ಬಿಲ್ ಕಟ್ಟುವ ಆಗಿಲ್ಲ ಎಂದು ಡಾ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

Key words: last election – Siddaramaiah- Give -opportunity – Dr. Yatindra Siddaramaiah