ಲಾರಿಯ ಮೇಲೆ ಬಿದ್ದ ಬೃಹತ್ ಆಲದಮರ: ಸಂಚಾರ ಅಸ್ತವ್ಯಸ್ತ..

ಪಾಂಡವಪುರ,ಜೂ,12,2019(www.justkannada.in): ಮಂಡ್ಯ ಜಿಲ್ಲೆ ಪಾಂಡವಪುರ ಬಳಿಯ ಹೆದ್ದಾರಿಯಲ್ಲಿ  ಬೆಳ್ಳಂಬೆಳಗ್ಗೆ ಲಾರಿಯ ಮೇಲೆ ಏಕಾಏಕಿ ಬೃಹತ್ ಆಲದಮರ ಬಿದ್ದು ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾದ ಘಟನೆ ನಡೆದಿದೆ.

ಬೃಹತ್ ಮರ ಮುಖ್ಯ ರಸ್ತೆಯಲ್ಲಿ ಬಿದ್ದ ಪರಿಣಾಮ ಲಾರಿ ಸಂಪೂರ್ಣ ಜಖಂ ಆಗಿದ್ದು ಸ್ಥಳದಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತ ಉಂಟಾಗಿ ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿತು. ಸದ್ಯ ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಪ್ರಾಣಪಾಯವಾಗಿಲ್ಲ. ಆದರೆ ಏಕಾಏಕಿ ಬೃಹತ್ ಮರ ಬಿದ್ದು ಸಂಪೂರ್ಣ ರಸ್ತೆ ಬಂದ್‌ ಆಗಿ ಸಂಚಾರಕ್ಕೆ ಅಡಚಣೆ ಉಂಟಾಯಿತು.

Key words: Large banyan tree fell on the lorry. Traffic jams.

#pandavapura #banyantree #fell #lorry