Sunday, September 20, 2026

BDA Apartments

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಕುರಿತು ವೀಕ್ಷಕರ ಆಕ್ರೋಶ ! BDA JK_Adv BDA Adv
Home Cinema ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಕುರಿತು ವೀಕ್ಷಕರ ಆಕ್ರೋಶ !

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಕುರಿತು ವೀಕ್ಷಕರ ಆಕ್ರೋಶ !

ಬೆಂಗಳೂರು, ಜೂನ್ 12, 2019 (www.justkannada.in): ಝೀ ಕನ್ನಡದ ವೀಕೆಂಡ್  ವಿತ್ ರಮೇಶ್ ಕಾರ್ಯಕ್ರಮದ ಬಗ್ಗೆ ವೀಕ್ಷಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಈ ವಾರದ ಸಾಧಕನಾಗಿ ಹಾಸ್ಯ ನಟನಾಗಿ ಚಿತ್ರರಂಗಕ್ಕೆ ಬಂದು ನಂತರ ನಾಯಕನ ಪಟ್ಟಕ್ಕೇರಿದ ಶರಣ್ ಅವರನ್ನು ಸಾಧಕರ ಸೀಟ್ ಗೆ ಕರೆಸಿರುವುದು ವೀಕ್ಷಕರ ಕೋಪಕ್ಕೆ ಕಾರಣವಾಗಿದೆ.

ಸಿನಿಮಾದವರು ಹೊರತು ಬೇರೆ ಯಾವ ಸಾಧಕರು ಇಲ್ಲವೇ ಎಂದು ವೀಕ್ಷಕರು ಪ್ರಶ್ನಿಸುತ್ತಿದ್ದಾರೆ. ಬೇರೆ ಸಾಧಕರನ್ನು ಕರೆತರುವ ತನಕ ಕಾರ್ಯಕ್ರಮವನ್ನು ನೋಡುವುದೇ ಇಲ್ಲ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.