ಹಾಸನದಲ್ಲಿ ಕೊರೋನಾ ಚಿಕಿತ್ಸೆಗೆ ಲಕ್ಷ ಲಕ್ಷ ಹಣ ವಸೂಲಿ: ಜಿಲ್ಲಾಧಿಕಾರಿಗಳೇ ಕ್ರಮ ಕೈಗೊಳ್ಳಿ- ಮಾಜಿ ಸಚಿವ ಹೆಚ್.ಡಿ ರೇವಣ್ಣ ಆಗ್ರಹ…

ಹಾಸನ,ಅಕ್ಟೋಬರ್,21,2020(www.justkannada.in): ಹಾಸನದಲ್ಲಿ ಕೊರೋನಾ ಚಿಕಿತ್ಸೆಗೆ ಲಕ್ಷ ಲಕ್ಷ ಹಣ ವಸೂಲಿ ಮಾಡುತ್ತಿದ್ದಾರೆ. ಇಲ್ಲಿ ಆಡಳಿತ ಇದೆಯೋ ಇಲ್ವೋ ಗೊತ್ತಿಲ್ಲ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಕಿಡಿ ಕಾರಿದ್ದಾರೆ.jk-logo-justkannada-logo

ಹಾಸನದಲ್ಲಿ ಇಂದು ಮಾತನಾಡಿದ ಮಾಜಿ ಸಚಿವ ಹೆಚ್.ಡಿ ರೇವಣ್ಣ, ಕೊರೋನಾ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯವರು 10ರಿಂದ 15 ಲಕ್ಷ ವಸೂಲಿ ಮಾಡುತ್ತಿದ್ದಾರೆ. ಇದನ್ನ ಕೇಳೋಕೆ ಯಾರು ಇಲ್ಲ. ಹಾಸನದಲ್ಲಿ ಆಡಳಿತ ಇದೆಯೋ ಇಲ್ಲವೋ ಗೊತ್ತಿಲ್ಲ. ಸ್ಪರ್ಶ ಆಸ್ಪತ್ರೆಗೆ ನಾವೇ ಬೀಗ ಹಾಕಿಸುತ್ತೇವೆ ಎಂದು ಹೇಳಿದ್ದಾರೆ.

ಆಸ್ಪತ್ರೆಗಳಲ್ಲಿ ಮೃತದೇಹ ಇಟ್ಟಿಕೊಂಡು ಬಿಲ್ ಕೇಳುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಕೂಡಲೇ ಖಾಸಗಿ ಆಸ್ಪತ್ರೆಗಳ ಸಭೆ ಕರೆದು  ಹಣ ವಸೂಲಿ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಆಗ್ರಹಿಸಿದ್ದಾರೆ.lakhs-corona-treatment-hassan-former-minister-hd-revanna

ಹಾಗೆಯೇ ಹಾಸನಕ್ಕೆ ನೆರೆಪರಿಹಾರ ಬಿಡಿಗಾಸು ಬಂದಿಲ್ಲ. ಸಿಎಂ 5 ತಾಲ್ಲೂಕುಗಳನ್ನು ನೆರೆಪೀಡಿತ ಎಂದು ಘೋಷಿಸಿದ್ದಾರೆ ಅಷ್ಟೇ ಎಂದು ಹೆಚ್.ಡಿ ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು.

Key words: Lakhs – corona- treatment – Hassan-Former Minister- HD Revanna