Tuesday, September 22, 2026

BDA Apartments

ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣ: ಸಂಸತ್ನಲ್ಲಿ ಮುಂದುವರಿದ ಗದ್ದಲ BDA JK_Adv BDA Adv
Home Front Page ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣ: ಸಂಸತ್ನಲ್ಲಿ ಮುಂದುವರಿದ ಗದ್ದಲ

ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣ: ಸಂಸತ್ನಲ್ಲಿ ಮುಂದುವರಿದ ಗದ್ದಲ

ನವದೆಹಲಿ, ಡಿಸೆಂಬರ್ 17, 2021 (www.justkannada.in): ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾರನ್ನು ಸಂಪುಟದಿಂದ ಕೈ ಬಿಡುವಂತೆ ಪ್ರತಿಪಕ್ಷಗಳು ಬಿಗಿ ಪಟ್ಟು ಹಿಡಿದಿವೆ.

ಹೀಗಾಗಿ ಸಂಸತ್ ಉಭಯ ಸದನಗಳಲ್ಲಿ ಉತ್ತರ ಪ್ರದೇಶ ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣ ತೀವ್ರ ಗದ್ದಲಕ್ಕೆ ಕಾರಣವಾಗಿದೆ.

ನಾಲ್ವರು ರೈತರು, ಒಬ್ಬ ಪತ್ರಕರ್ತ ಸೇರಿದಂತ ಎಂಟು ಮಂದಿ ಪ್ರಾಣ ತೆಗೆದ ಪ್ರಕರಣದಲ್ಲಿ ಅಪರಾಧಿಗೆ ಕೇಂದ್ರ ಸರ್ಕಾರವೇ ರಕ್ಷಣೆ ನೀಡುತ್ತಿದೆ ಎಂದು ಪ್ರತಿಪಕ್ಷ ಸದಸ್ಯರು ಆರೋಪಿಸಿದ್ದಾರೆ.

ಅಮಾನತುಗೊಂಡ ರಾಜ್ಯಸಭೆಯ 12 ಸದಸ್ಯರು ಕಲಾಪದಲ್ಲಿ ಭಾಗವಹಿಸುವುದಕ್ಕೆ ಅನುಮತಿ ನೀಡುವಂತೆ ಆಗ್ರಹಿಸಿದ್ದಾರೆ.