ಮನೆ ಕುಸಿದು ಕೂಲಿ ಕಾರ್ಮಿಕ ಸಾವು: ಮನೆ ಮಾಲೀಕನಿಗೆ ಗಾಯ.

ಮೈಸೂರು,ಸೆಪ್ಟಂಬರ್,6,2022(www.justkannada.in):  ಮನೆ ಕುಸಿದು ಕೂಲಿ ಕಾರ್ಮಿಕ ಸಾವನ್ನಪ್ಪಿ ಮನೆ ಮಾಲೀಕನಿಗೆ ಗಾಯಗಳಾಗಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನಲ್ಲಿ ನಡೆದಿದೆ.

ಹೆಚ್.ಡಿ ಕೋಟೆ ತಾಲ್ಲೂಕಿನ ಹೆಬ್ಬಲಗುಪ್ಪೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.  ಕೂಲಿಕಾರ್ಮಿಕ ಕುಳ್ಳಯ್ಯ ಮೃತಪಟ್ಟವರು. ಮನೆ ಮಾಲೀಕ ಬೋರಯ್ಯಗೆ ಗಾಯಗಳಾಗಿದ್ದು ಗಾಯಾಳುವನ್ನ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.Suspected- death - housewife -mysore

ಮಳೆಯಿಂದಾಗಿ  ಶಿಥಿಲಗೊಂಡಿದ್ದ ಮನೆ ರಿಪೇರಿ ಮಾಡುವಾಗ ಈ ದುರ್ಘಟನೆ ಸಂಭವಿಸಿದೆ. ಈ ಕುರಿತು ಹೆಚ್.ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words:  Labor- death-house –collapse-mysore