ಕಡೆಗೂ ಕೋಟ್ಯಾಂತರ ರೂ. ಮೌಲ್ಯದ ಸರಕಾರಿ ಭೂಮಿ ಉಳಿಸಿಕೊಳ್ಳುವ ರೋಹಿಣಿ ಸಿಂಧೂರಿ ಶ್ರಮ ವ್ಯರ್ಥವಾಯ್ತು..

 

ಮೈಸೂರು, ಜು.27, 2021 : (www.justkannada.in news ) ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಕುರುಬರಹಳ್ಳಿಯ ಸರ್ವೇ ನಂ. ೪ ರ ೧೫೬೩.೩೧ ಎಕರೆ ಭೂಮಿಗೆ ಸಂಬಂಧಪಟ್ಟ ಮನವಿಯನ್ನು ಮಾನ್ಯ ಸರ್ವೋಚ್ಛ ನ್ಯಾಯಾಲಯ ನಿನ್ನೆ ವಜಾಗೊಳಿಸಿದೆ. ಆ ಮೂಲಕ ಸರಕಾರಿ ಭೂಮಿ ಉಳಿಸಿಕೊಳ್ಳಲು ಯತ್ನಿಸಿದ್ದ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಶ್ರಮ ವ್ಯರ್ಥವಾದಂತಾಗಿದೆ.

ಈ ಪ್ರಕರಣಕ್ಕಾಗಿ ಖ್ಯಾತ ವಕೀಲ ಹರೀಶ್ ಸಾಳ್ವೆ ಅವರ ಸೇವೆಯನ್ನು ಪಡೆಯಲಾಗಿತ್ತು, ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಸರಕಾರಿ ಭೂಮಿಯನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಖ್ಯಾತ ವಕೀಲರನ್ನೇ ನೇಮಿಸಲು ನಿರ್ಧರಿಸಿ ಈ ತೀರ್ಮಾನ ಮಾಡಿದ್ದರು. ಈ ಸಂಬಂಧ ಸಾಳ್ವೆಯವರನ್ನು ಸಂಪರ್ಕಿಸಿ ಅವರನ್ನು ಒಪ್ಪಿಸಿದ್ದರು. ಸಾವಿರಾರು ಕೋಟಿ ರೂ.ಮೌಲ್ಯದ ಸರಕಾರಿ ಜಮೀನನ್ನು ಉಳಿಸಿಕೊಳ್ಳುವ ಸಲುವಾಗಿ, ವಕೀಲರಿಗೆ ಸರಕಾರದ ವತಿಯಿಂದ 20 ಲಕ್ಷ ರೂ. ಶುಲ್ಕ ಭರಿಸಲು ಸಹ ಸಮ್ಮತಿಸಲಾಗಿತ್ತು.
ಈ ಸಂಬಂಧ ರಾಜ್ಯ ಸರಕಾರ ಸಹ ಮಾ.1, 2021 ರಂದು GO (ಸರಕಾರಿ ಆದೇಶ) ಹೊರಡಿಸಿತ್ತು. ಅದರಂತೆ ಸಾಳ್ವೆ ಅವರಿಗೆ ಆಗ ಮೈಸೂರು ಜಿಲ್ಲಾಡಳಿತದ ಪ್ರಕರಣದ ಸಂಪೂರ್ಣ ಮಾಹಿತಿ ಒದಗಿಸಿತ್ತು.

supreme-court-upholding-karnataka-high-court-order-central-government-oxigen

ಆದರೆ ಪ್ರಸ್ತುತ, ಮೈಸೂರು ಜಿಲ್ಲಾಡಳಿತ, ನಿನ್ನೆ ನ್ಯಾಯಾಲಯದಲ್ಲಿ ಹಾಜರಾಗುವಂತೆ ವಕೀಲರಿಗೆ ಮನವಿ ಮಾಡುವಲ್ಲಿ ವಿಫಲರಾಗಿದ್ದು, ಈ ಕುರಿತಂತೆ ಹರೀಶ್ ಸಾಳ್ವೆ ಅವರಿಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ತಿಳಿದು ಬಂದಿದೆ.

ಈ ಭೂಮಿಯ ಬೆಲೆಯೊಂದೇ ರೂ.೧೦,೦೦೦ ಕೋಟಿಗೂ ಹೆಚ್ಚು ! ಹಾಗಾಗಿ ಇದನ್ನು ಉಳಿಸಿಕೊಳ್ಳಲು ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸಾಕಷ್ಟು ಪ್ರಯತ್ನಿಸಿದ್ದರು. ಆದರೆ ಈಗ ಅದು ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಶಾಶ್ವತವಾಗಿ ಕೈಬಿಟ್ಟಂತಾಗಿದೆ.
ಮುಂದಿನ ಕೆಲವು ವರ್ಷಗಳಲ್ಲಿ ಇಲ್ಲಿರುವ ೧೬೦೦ ಎಕರೆ ಭೂಪ್ರದೇಶ ಕಾಂಕ್ರೀಟ್ ಕಾಡಾಗಿ ಮಾರ್ಪಡಾಗಲಿದೆ.

ನಗರದ ಹೃದಯಭಾಗದಲ್ಲಿರುವ ೧೫೬೩ ಎಕರೆ ಭೂಮಿ ಸ್ಪಷ್ಟ ಸರ್ಕಾರಿ ಆಸ್ತಿಗಳನ್ನೂ ಒಳಗೊಂಡಿದೆ. ಅವುಗಳೆಂದರೆ: ಎಟಿಐ, ಮೈಸೂರು – ಐಎಎಸ್/ಕೆಎಎಸ್ ತರಬೇತಿ ಸಂಸ್ಥೆ, ಕೆರೆಗಳು, ಲಲಿತ್ ಮಹಲ್ ಪ್ಯಾಲೆಸ್, ರಸ್ತೆಗಳು, ಸಾರ್ವಜನಿಕ ಉದ್ಯಾನವನಗಳು, ಪ್ರಾಣಿ ಸಂಗ್ರಾಹಲಯ, ಪೊಲೀಸ್ ರೇಂಜ್, ಇತ್ಯಾದಿ ಈ ಪಟ್ಟಿಯಲ್ಲಿ ಸೇರಿದೆ.

 

key words : kurubarahalli survey number 4 – case pertaining to 1563.31 acres-  at the foothills of chamundi – has been dismissed-  by Supreme Court.

 

ENGLISH SUMMARY :

The kurubarahalli survey number 4 case pertaining to 1563.31 acres at the foothills of chamundi has been dismissed by Supreme Court yesterday. land will comprise more than Rs 10,000cr.
1600 acress of lush green cover will turn into concrete jungle in the next few years. The part of 1563 acres in heart of city includes following clear cut govt properties (1) ATI Mysuru – IAS/KAS Training Institute (2) Lakes (3) Lalit Mahal Palace (4) Roads, public parks (5) Zoo (6) Police range