ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಮಾಜಿ ಸಚಿವ ಆರ್. ಅಶೋಕ್.

ಬೆಂಗಳೂರು,ಜುಲೈ,27,2021(www.justkannada.in):  ಸಿಎಂ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ ಬೆನ್ನಲ್ಲೆ ನೂತನ ಮುಖ್ಯಮಂತ್ರಿ ಆಯ್ಕೆಗೆ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದ್ದು ಈ ಸಂಬಂಧ ಇಂದು ಸಂಜೆ 7 ಗಂಟೆಗೆ ಬಿಜೆಪಿ ಶಾಸಕಾಂಗ ಸಭೆ ಕರೆಯಲಾಗಿದೆ.jk

ಇಂದು ಸಂಜೆ ನಡೆಯುವ ಬಿಜೆಪಿ ಶಾಸಕಾಂಗ ಸಭೆಯಲ್ಲಿ ನೂತನ ಸಿಎಂ ಬಗ್ಗೆ ಚರ್ಚೆ ನಡೆಯಲಿದ್ದು ಬಳಿಕ ಹೊಸ ಮುಖ್ಯಮಂತ್ರಿ ಯಾರೆಂದು ಘೋಷಣೆಯಾಗುವ ಸಾಧ್ಯತೆ ಇದೆ. ಈ ಮಧ್ಯೆ ಸಿಎಂ ಸ್ಥಾನಕ್ಕಾಗಿ ಲಾಬಿ ಜೋರಾಗಿದ್ದು, ಮಾಜಿ ಸಚಿವ ಆರ್.ಅಶೋಕ್ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದಾರೆ.

ಸಿಎಂ ಆಗುವ ಆಸೆ  ನನಗೂ ಇದೆ. ಬೇರೆಯವರಿಗೂ ಇದೆ. ಅದೃಷ್ಟ ಇದ್ದವರು ಸಿಎಂ ಆಗುತ್ತಾರೆ.   ಪಕ್ಷ ಕಾರ್ಯಕರ್ತನೂ ಸಿಎಂ ಸ್ಥಾನ ಸಿಕ್ಕರೂ ಸಿಗಬಹುದು.  ಪಕ್ಷದ ದೇವರ ಆಶೀರ್ವಾದ ಇದ್ದವರು ಸಿಎಂ ಆಗಬಹುದು.  ಸಿಎಂ ಯಾರೆಂದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಬಿಜೆಪಿ ಸಂಸದೀಯ ಮಂಡಳಿಯೇ ನೂತನ ಸಿಎಂ ಹೆಸರು ಘೋಷಣೆ ಮಾಡಲಿದೆ ಎಂದು ಆರ್ ಅಶೋಕ್ ತಿಳಿಸಿದರು.

Key words: Former minister- R. Ashok-expressed- his desire – become- CM