Sunday, August 23, 2026

BDA Apartments

Home Crime ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ:  ಬಿಬಿಎಂಪಿ ನೌಕರ ದುರ್ಮರಣ.

ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ:  ಬಿಬಿಎಂಪಿ ನೌಕರ ದುರ್ಮರಣ.

ಬೆಂಗಳೂರು,ನವೆಂಬರ್,5,2022(www.justkannada.in):  ಬೈಕ್ ಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿಯಾಗಿ ಬಿಬಿಎಂಪಿ ನೌಕರ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೈಸೂರ್ ಬ್ಯಾಂಕ್ ಸರ್ಕಲ್ ಬಳಿ ಈ ಘಟನೆ ನಡೆದಿದೆ. ಬಿಬಿಎಂಪಿ ನೌಕರರ  ಶ್ರೀಧರ್ ಮೃತಪಟ್ಟ ವ್ಯಕ್ತಿ. ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರರನ್ನ ಸ್ಥಳೀಯ ಪೊಲೀಸರು ಸೆಂಟ್ ಮಾರ್ಥಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಶ್ರೀಧರ್ ಮೃತಪಟ್ಟಿದ್ದಾರೆ.

ಬಸ್ ತಿರುಪತಿಯಿಂದ ಬೆಂಗಳೂರಿಗೆ ಸಂಚರಿಸುತ್ತಿತ್ತು.  ಈ ಕುರಿತು ಹಲಸೂರು ಗೇಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: KSRTC –bus-collision-BBMP- employee- dies.