ಅಧಿಕಾರಿಗಳಿಗೆ ತರಾಟೆ: ಗುದ್ದಲಿ ಪೂಜೆ ನೆರವೇರಿಸದೆ ವಾಪಸ್‌ ಆದ ಸಂಸದೆ ಸುಮಲತಾ ಅಂಬರೀಶ್.

ಮೈಸೂರು,ಮಾರ್ಚ್,9,2022(www.justkannada.in): ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸಂಸದೆ ಸುಮಲತಾ ಅಂಬರೀಶ್ ಮತ್ತು  ಜೆಡಿಎಸ್ ನಡುವಿನ ಸಮರ ಮುಂದುವರೆದಿದ್ದು,  ಸರಿಯಾದ ವ್ಯವಸ್ಥೆ ಮಾಡದ ಹಿನ್ನೆಲೆ ಸಂಸದೆ ಸುಮಲತಾ ಅಂಬರೀಶ್  ನಿಗದಿಯಾಗಿದ್ದ ಗುದ್ದಲಿ ಪೂಜೆ ನೆರವೇರಿಸದೆ ವಾಪಸ್ ಆದ ಘಟನೆ ನಡೆದಿದೆ.

ಕೆಆರ್.ನಗರದ ಚೌಕಹಳ್ಳಿಯಲ್ಲಿ ಗುದ್ದಲಿ ಪೂಜೆ ಏರ್ಪಡಿಸಲಾಗಿತ್ತು. ನಾಲೆ ದುರಸ್ತಿ ಕಾಮಗಾರಿಗೆ ಚಾಲನೆ ನೀಡಲು ಸಂಸದೆ ಸುಮಲತಾ ಅಂಬರೀಶ್ ತೆರಳಿದ್ದರು. ಗುದ್ದಲಿಪೂಜೆ ಸ್ಥಳದಲ್ಲಿ ಸರಿಯಾಗಿ ಶಾಮಿಯಾನ, ಚೇರ್ ವ್ಯವಸ್ಥೆ ಮಾಡದ ಹಿನ್ನೆಲೆ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದ ಸಂಸದೆ ಸುಮಲತಾ ಅವರು ಗುದ್ದಲಿ ಪೂಜೆ ನೆರವೇರಿಸದೆ ವಾಪಸ್‌ ಆಗಿದ್ದಾರೆ.

ಗುದ್ದಲಿಪೂಜೆ ಸ್ಥಳದಲ್ಲಿ ಸರಿಯಾಗಿ ಶಾಮಿಯಾನ, ಚೇರ್ ವ್ಯವಸ್ಥೆ ಮಾಡದಕ್ಕೆ ಕೋಪಗೊಂಡ ಸಂಸದೆ ಸುಮಲತಾ ಅಂಬರೀಶ್. ಕಾರ್ಯಪಾಲಕ ಅಭಿಯಂತರ ಜಿಜೆ ಈರಣ್ಣ, ಸಹಾಯಕ ಕಾರ್ಯಪಾಲಕ ಅಭಿಯಂತರ ಬಿಜೆ.ಗುರುರಾಜ್, ಹಾಗೂ ಇಂಜಿನಿಯರ್ ಅಭಿಲಾಷ್ ತರಾಟೆ ತೆಗೆದುಕೊಂಡರು. ಕುಶಾಲನಗರ ವೃತ ಸೂಪರಿಂಟೆಂಡೆಂಟ್ ಇಂಜಿನಿಯರ್‌ ಚೆನ್ನಕೇಶವ ಅವರಿಗೂ ಕರೆ ಮಾಡಿ  ಕ್ಲಾಸ್ ತೆಗೆದುಕೊಂಡರು.

ನೀವು ಸಂಸದರಿಗೆ ಅಗೌರವ ತೋರಿಸುತ್ತಿದ್ದೀರಿ. ಶಿಸ್ತು ಬದ್ಧ ವ್ಯವಸ್ಥೆ ಮಾಡಿಲ್ಲ. ಪ್ರತಿಭಾರಿ ಹೀಗೆ ಮಾಡುತ್ತೀರಿ. ನಿಮ್ಮಗಳ ವಿರುದ್ಧ ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿಗೆ ದೂರು ನೀಡುತ್ತೇನೆ. ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮಕ್ಕೆ ಒತ್ತಾಯ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಕೆ.ಆರ್ ನಗರ ಜೆಡಿಎಸ್ ಶಾಸಕ ಸಾರಾ.ಮಹೇಶ್ ಪ್ರತಿನಿದಿಸುವ ವಿಧಾನಸಭಾ ಕ್ಷೇತ್ರವಾಗಿದ್ದು, ಕೇಂದ್ರ ಸರ್ಕಾರದ ಸಂಸದರ ನಿಧಿಯಿಂದ ಕಾಮಗಾರಿ ಕೈಗೊಳ್ಳಲಾಗಿತ್ತು.

Key words: KR Nagar-MP-Sumalatha ambarish-JDS