ಮಹಿಳಾ ಅಸಮಾನತೆ ಮತ್ತು ಪೂರ್ವಾಗ್ರಹಗಳ ವಿರುದ್ಧ ಹೋರಾಡಲು ಡಿಜಿಟಲ್ ಮಾಧ್ಯಮ ಸಹಾಯಕ – ಡಾ. ಹೇಮಾ ದಿವಾಕರ್

womens-day-hema.divakar

 

ಬೆಂಗಳೂರು, ಮಾ.09, 2022 : ಮಹಿಳೆಯರ ಬಗೆಗಿನ ಅಸಮಾನತೆ ಹೋಗಲಾಡಿಸಲು ಮತ್ತು ಅವರನ್ನು ಸಬಲೀಕರಣಗೊಳಿಸಲು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಡಿಜಿಟಲೀಕರಣವು ಮಹಿಳಾ ಆರೋಗ್ಯ ರಕ್ಷಣೆಯ ವಿಷಯದಲ್ಲಿ ಹಿಂದೆಂದಿಗಿಂತಲೂ ಕ್ರಾಂತಿಕಾರಿಯಾಗಿದೆ ಎಂದು ಮಹಿಳಾ ಆರೋಗ್ಯ ರಕ್ಷಣಾ ಕ್ಷೇತ್ರದ ಪ್ರವರ್ತಕಿ ಡಾ.ಹೇಮಾ ದಿವಾಕರ್ ಹೇಳಿದರು.

ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಹೇಳಿಕೆ ನೀಡಿರುವ ಅವರು, ಗೌಪ್ಯತೆ ಮತ್ತು ಅನಾಮಧೇಯತೆಯನ್ನು ಡಿಜಿಟಲ್ ಮಾಧ್ಯಮ ಖಾತ್ರಿಗೊಳಿಸುತ್ತದೆ. ಮಾನಸಿಕ ಸಮಸ್ಯೆ ಸೇರಿದಂತೆ ಇಂದಿನ ಯುವಜನರಲ್ಲಿರುವ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಸಹ ಇದು ಪ್ರಮುಖವಾಗಿದೆ ಎಂದು ಹೇಳಿದ್ದಾರೆ.

ಲಿಂಗ ಸಮಾನತೆಯು ಪ್ರಸ್ತುತ ಸಂದರ್ಭದಲ್ಲಿ ಒಂದು ಅಸತ್ಯವೇ ಆಗಿದೆ. ಏಕೆಂದರೆ ಪುರುಷರು ಇನ್ನೂ ಮಹಿಳೆಯರ ವಿರುದ್ಧದ ಪೂರ್ವಾಗ್ರಹದಿಂದ ಹೊರಬರಲು ಸಾಧ್ಯವಾಗಿಲ್ಲ. ಆದರೆ ಮಾಹಿತಿ ಮತ್ತು ಸೌಲಭ್ಯಗಳ ವಿಷಯಕ್ಕೆ ಬಂದಾಗ ಡಿಜಿಟಲ್ ಪ್ರಪಂಚವು ಪುರುಷ ಮತ್ತು ಮಹಿಳೆಯರಿಗೆ ಸಮನಾಗಿ ಅವಕಾಶ ಒದಗಿಸಿದೆ ಎಂದು ಅವರು ತಿಳಿಸಿದರು.

ಮಾರ್ಚ್ 8 ರಂದು ಆಚರಿಸಲಾಗುವ ಅಂತರರಾಷ್ಟ್ರೀಯ ಮಹಿಳಾ ದಿನದ ಈ ವರ್ಷದ ಥೀಮ್ “ಸುಸ್ಥಿರ ನಾಳೆಗಾಗಿ ಇಂದು ಲಿಂಗ ಸಮಾನತೆ”. ವಿಶ್ವಸಂಸ್ಥೆಯು “ಅಸಮಾನತೆಯನ್ನು ಹೊಡೆದೋಡಿಸಿ”  ಎಂಬ ಅಡಿಬರಹ ನೀಡುವುದರೊಂದಿಗೆ ವಿಷಯವನ್ನು ಸೂಕ್ತವಾಗಿ ಮಂಡಿಸಿದೆ ಎಂದು ಅವರು ಹೇಳಿದರು.

2020 ರಲ್ಲಿ ಯುಎನ್‌ಡಿಪಿ ಬಿಡುಗಡೆ ಮಾಡಿದ ಲಿಂಗ ಸಾಮಾಜಿಕ ಮಾನದಂಡಗಳ ಸೂಚ್ಯಂಕದಲ್ಲಿ, ಶೇಕಡಾ 90 ರಷ್ಟು ಪುರುಷರು ಮತ್ತು ಮಹಿಳೆಯರು ಮಹಿಳೆಯರ ವಿರುದ್ಧ ಕೆಲವು ಅಸಮಾನತೆಯ ಧೋರಣೆಯನ್ನು ಹೊಂದಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಸಮಾನತೆಯನ್ನು ಸಾಧಿಸುವಲ್ಲಿ ಮಹಿಳೆಯರು ಎದುರಿಸುತ್ತಿರುವ ಅಗೋಚರ ಅಡೆತಡೆಗಳನ್ನು ಹೋಗಲಾಡಿಸಲು ಹೊಸ ಸಾಧ್ಯತೆಗಳನ್ನು ತೋರಿಸಿದೆ.

ಬದುಕಿನ ಮೂಲಭೂತ ಅಗತ್ಯಗಳ ವಿಷಯದಲ್ಲಿ ಪುರುಷರಂತೆ ಮಹಿಳೆಯರಿಗೆ ಕೂಡ ಸಮಾನ ಅವಕಾಶವಿದೆ. 1990 ರಿಂದ ತಾಯಂದಿರ ಮರಣವು ಶೇ.45 ರಷ್ಟು ಕಡಿಮೆಯಾಗಿದೆ. ಆದರೆ ಇತರ ಪ್ರದೇಶಗಳಲ್ಲಿ ಲಿಂಗ ಅಂತರಗಳು ಇನ್ನೂ ಸ್ಪಷ್ಟವಾಗಿ ಕಾಣುತ್ತವೆ. ಲಿಂಗ ಸಮಾನತೆಯ ಹೋರಾಟವು ಅಸಮಾನತೆ ಮತ್ತು ಪೂರ್ವಾಗ್ರಹಗಳಿಂದ ತುಂಬಿದೆ ಎಂದು ಯುಎನ್‌ಡಿಪಿ ಅಧಿಕಾರಿಯೊಬ್ಬರು ಉಲ್ಲೇಖಿಸಿದ್ದಾರೆ ಎಂದು ಡಾ. ಹೇಮಾ ಹೇಳಿದರು.

ಪೂರ್ವಾಗ್ರಹರಹಿತ ಮತ್ತು ತಾರತಮ್ಯ ಮುಕ್ತ ಜಗತ್ತನ್ನು ನೋಡುವ ನಿಟ್ಟಿನಲ್ಲಿ ಕೆಲಸ ಮಾಡುವ ಸಮಯ ಇದು ಎಂದು ಅವರು ಹೇಳಿದರು. ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ, ಮಹಿಳೆಯರಿಗೆ ಸಂಪೂರ್ಣ ಡಿಜಿಟಲೀಕರಣದ ಮುಖಾಂತರ ಆರೋಗ್ಯ ಸೇವೆ ಒದಗಿಸುವುದು ಪ್ರಸ್ತುತ ಇರುವ ಆರೋಗ್ಯ ಸೇವೆಯ ಮುಂದಿನ ಭಾಗವಾಗಿದೆ. ಆರೋಗ್ಯ ಭದ್ರತೆ ಮತ್ತು ಕೈಗೆಟಕುವ ದರದ ನಡುವೆ ಸಾಕಷ್ಟು ಅಂತರಗಳಿವೆ. ವಿವಿಧ ಕಾರಣಗಳಿಗಾಗಿ ಆರೋಗ್ಯ ಸೇವೆಯನ್ನು ಪಡೆಯುವುದು ಸುಲಭವಲ್ಲ. ಉದಾಹರಣೆಗೆ, ವೆಚ್ಚ, ಭೌಗೋಳಿಕ ಕ್ಷೇತ್ರ ಆರೋಗ್ಯ ರಕ್ಷಣೆಯನ್ನು ಸುಲಭವಾಗಿ ಪಡೆಯಲು ಇರುವ ಕೆಲವು ಅಡ್ಡಿಗಳಾಗಿವೆ.

ಪ್ರಸ್ತುತ ಇಂತಹ ಪರಿಸ್ಥಿತಿ ಇರುವಾಗ, ಡಿಜಿಟಲ್ ವೇದಿಕೆಗಳು ವೈದ್ಯಕೀಯ ಸೌಲಭ್ಯಗಳನ್ನು ಮಹಿಳೆಯರಿಗೆ ತಲುಪಿಸಲು ಸಹಾಯ ಮಾಡುತ್ತದೆ. ಡಿಜಿಟಲ್ ಅಳವಡಿಕೆ ಮೂಲಕ ಈ ಕೆಲಸವು ವೇಗವಾಗಿ ಆಗಬಹುದು. ಕೌಶಲ್ಯ ವರ್ಗಾವಣೆಗಾಗಿನ ಏಷ್ಯನ್ ಸಂಶೋಧನೆಯು ಕಳೆದ ಹಲವು ವರ್ಷಗಳಿಂದ ಇದನ್ನು ಯಶಸ್ವಿಯಾಗಿ ಮಾಡುತ್ತಿದೆ. ನಾವು ಬೇಡಿಕೆಯನ್ನು ಹೆಚ್ಚಿಸಿದಾಗ, ಉತ್ತಮ ಗುಣಮಟ್ಟದ ಪೂರೈಕೆಯು ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಇವೆರಡರ ನಡುವೆ ಯಾವುದೇ ತಡೆಗೋಡೆ ಇರಬಾರದು. ಡಿಜಿಟಲ್ ಹೆಲ್ತ್‌ಕೇರ್ ಎರಡರ ನಡುವಿನ ಅಂತರವನ್ನು ಕಡಿಮೆ ಮಾಡುತ್ತಿದೆ ಎಂದು ಅವರು ವಿವರಿಸಿದರು.

ಡಾ. ಹೇಮಾ ಅವರು ಏಷ್ಯನ್ ರಿಸರ್ಚ್ & ಟ್ರೈನಿಂಗ್ ಫಾರ್ ಸ್ಕಿಲ್ ಟ್ರಾನ್ಸ್‌ಫರ್‌ನ ಸಿಇಒ (ಆರ್ಟಿಸ್ಟ್ ಫಾರ್ ಹರ್) ಮತ್ತು ಫೆಡರೇಶನ್ ಆಫ್ ಅಬ್ಸ್ಟೆಟ್ರಿಕ್ ಮತ್ತು ಗೈನೆಕೊಲಾಜಿಕಲ್ ಸೊಸೈಟೀಸ್ ಆಫ್ ಇಂಡಿಯಾ (ಫೋಗ್ಸಿ) ಯುಕೆ ಮೂಲದ ಫಿಗೋಗೆ ರಾಯಭಾರಿಯಾಗಿದ್ದಾರೆ. ಅವರು ಮಹಿಳಾ ಆರೋಗ್ಯ ರಕ್ಷಣೆ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಆರೋಗ್ಯ ರಕ್ಷಣೆಯನ್ನು ಪ್ರಚಾರ ಮಾಡುವಲ್ಲಿ ಪರಿಣತಿ ಹೊಂದಿರುವ ಪ್ರಸಿದ್ಧ ವೈದ್ಯರಾಗಿದ್ದಾರೆ.

 

key words : womens-day-hema.divakar