ಪಿರಿಯಾಪಟ್ಟಣದಲ್ಲಿ ಪತ್ರಕರ್ತನ ವಿರುದ್ದ ಪ್ರಕರಣ ದಾಖಲು ಖಂಡಿಸಿ ಕೆ.ಆರ್.ನಗರ ಪತ್ರಕರ್ತರ ಸಂಘದಿಂದ ಸಿಎಂಗೆ ದೂರು

ಕೆ.ಆರ್.ನಗರ, ಮೇ. 24 : ಪಿರಿಯಾಪಟ್ಟಣದಲ್ಲಿ ಪತ್ರಕರ್ತನ ವಿರುದ್ದ ಅಕ್ರಮವಾಗಿ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಕೆ.ಆರ್.ನಗರ ತಾಲ್ಲೋಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಅಧ್ಯಕ್ಷ ಭೇರ್ಯ ಮಹೇಶ್ ನೇತೃತ್ವದಲ್ಲಿ ತಹಸೀಲ್ದಾರ್ ಮೂಖಾಂತರ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು.
ಪಿರಿಯಾಪಟ್ಟಣದಲ್ಲಿ ಪತ್ರಕರ್ತ ಟಿ.ಜೆ.ಆನಂದ್ ಅಸ್ಪತ್ರೆಗೆ ವರದಿ ಮಾಡಲು ತೆರಳಿದ್ದರೂ ಅದನ್ನೆ ತನ್ನ ಕೆಲಸಕ್ಕೆ ಅಡ್ಡಿಪಡಿಸಿದರು ಎಂದು ಉಲ್ಲೇಖಿಸಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಶ್ರೀನಿವಾಸ ಅವರು ಪೋಲೀಸರಿಗೆ ದೂರು ನೀಡಿದ್ದಾರೆ. ಇದರ ಬಗ್ಗೆ ಸೂಕ್ತ ತನಿಖೆ ಮಾಡಿ ಪತ್ರಕರ್ತರಿಗೆ ನ್ಯಾಯ ಒದಗಿಸಿಕೊಡುವುದರ ಮೂಲಕ ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಶ್ರೀನಿವಾಸ್ ರವನ್ನು ಸೇವೆಯಿಂದ ವಜಾಮಾಡಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ತಾಲ್ಲೂಕು ಅಧ್ಯಕ್ಷ ಭೇರ್ಯ ಮಹೇಶ್ ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ.
ಉಪಾಧ್ಯಕ್ಷ ವಿನಯ್ ದೊಡ್ಡಕೊಪ್ಪಲು ಮಾತನಾಡಿ ಇತ್ತೀಚೆಗೆ ಪತ್ರಕರ್ತರ ಮೇಲೆ ಸುಳ್ಳು ದೂರುಗಳು ದಾಖಲಾಗುತ್ತಿದ್ದು ಹೆಚ್ಚಾಗುತ್ತಿದ್ದು ನಿರ್ಭಯವಾಗಿ ಪತ್ರಕರ್ತರು ಕೆಲಸಮಾಡದಂತಾಗಿದೆ ಅಧಿಕಾರಿಗಳು ತಮ್ಮ ತಪ್ಪು ಮುಚ್ಚಿಕೊಳ್ಳಲು ಪತ್ರಕರ್ತರ ಮೇಲೆ ಇಲ್ಲಸಲ್ಲದ ಸುಳ್ಳು ದೂರುಗಳನ್ನು ದಾಖಲಿಸುತ್ತಿದ್ದಾರೆ. ಅಧಿಕಾರಿಗಳು ತಮ್ಮ ತಪ್ಪುಗಳನ್ನು ಎತ್ತಿ ತೋರಿಸಿದರೆ ಅದನ್ನು ಸರಿಪಡಿಸಿಕೊಳ್ಳಬೇಕೆ ವಿನಃ ಅವರ ಮೇಲೆ ದೂರು ಕೊಡುವ ಪ್ರವೃತ್ತಿ ಬೆಳೆಸಿಕೊಳ್ಳಬಾರದು. ಪತ್ರಕರ್ತರು ಈ ಕೋರೋನಾ ಸಮಯದಲ್ಲಿ ಮನೆಯಿಂದ ಹೊರಬಂದು ಯಾವುದೇ ಭತ್ಯ ಇಲ್ಲದಿದ್ದರೂ ಸಮಾಜ ಒಳಿತಿಗಾಗಿ ಕೋರೋನಾ ವಾರಿರ‍್ಸ್ ಗಳಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ರಕ್ಷಣೆಗೆ ಸರ್ಕಾರ ಮುಂದಾಗಬೇಕೆAದು ಅಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ನಾಗೇಗೌಡ, ಸಹಕಾರ್ಯದರ್ಶಿ ರವಿಕುಮಾರ್, ಖಂಜಾಜಿ ಚೈತನ್ಯ, ಮೈಸೂರು ಜಿಲ್ಲಾ ಸಂಘದ ನಿರ್ದೇಶಕ ರಾಮಕೃಷ್ಣೇಗೌಡ, ವಡ್ಡರಕೊಪ್ಪಲು ಶಿವರಾಂ, ರಮೇಶ್, ನಗರದೂತ ಮಂಜುನಾಥ್, ಶಿಲ್ಪಶ್ರೀನಿವಾಸ್, ಯೋಗಾನಂದ, ಸ್ಪಿನ್‌ಕೃಷ್ಣ, ಜಿಕೆಟ್ ಶಂಕರ್, ಮೊಹಮ್ಮದ್ ಸಬೀರ್, ಕರ್ಪೂರವಳ್ಳಿ ಮಹದೇವ್, ಸೇರಿದಂತೆ ತಾಲ್ಲೋಕಿನ ಪತ್ರಿಕಾ ಮಾಧ್ಯಮದವರು ಹಾಜರಿದ್ದರು.