ಕುಡಿದ ಅಮಲಲ್ಲಿ ತಮ್ಮನಿಂದಲೇ ಅಣ್ಣನ ಹತ್ಯೆ…

ಮೈಸೂರು,ಮೇ,2,2019(www.justkannada.in): ಕುಡಿದ ಅಮಲಿ‌ನಲ್ಲಿ ತಮ್ಮನೇ  ಅಣ್ಣನನ್ನು ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ಕೆ.ಆರ್ ನಗರದಲ್ಲಿ ನಡೆದಿದೆ.

ಕೆ.ಆರ್.ನಗರ ಪಟ್ಟಣದ ಆಂಜನೇಯ ಬ್ಲಾಕ್‌ನಲ್ಲಿ ಈ ಘಟನೆ ನಡೆದಿದೆ. ರವಿಚಂದ್ರ(35)  ವ್ಯಕ್ತಿ. ತಮ್ಮ ವಿಜಯ ಕುಮಾರ್ ಎಂಬಾತನೇ ಹತ್ಯೆ ಮಾಡಿರುವುದು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ  ವಿಜಯ್ ಕುಮಾರ್ ತನ್ನ ಅಣ್ಣ ರವಿಚಂದ್ರ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ರಾತ್ರಿ 11 ಸಮಯದಲ್ಲಿ ಈ ಘಟನೆ ನಡೆದಿದೆ.

ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು ಕೊಲೆ ಆರೋಪಿ ವಿಜಯ ಕುಮಾರ್ ನನ್ನ ಬಂಧಿಸಿದ್ದಾರೆ.  ಈ ಕುರಿತು ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: KR NAGAR- drunken-brother- murder