ಉಡುಪಿ,ಮಂಗಳೂರಿನಲ್ಲಿ 10 ಸ್ಥಾನ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್.

ಮಂಗಳೂರು,ಫೆಬ್ರವರಿ,11,2023(www.justkannada.in):  ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ,ಮಂಗಳೂರಿನಲ್ಲಿ 10 ಸ್ಥಾನ ಗೆಲ್ಲುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಶಿವಕುಮಾರ್ . ಕರಾವಳಿಗೆ ಪ್ರತ್ಯೇಕ ಟೂರಿಸಂ ನೀತಿ ಮಾಡುತ್ತೇವೆ. ಬಿಲ್ಲವ ಬಂಟರಿಗೂ ಪ್ರತ್ಯೇಕ ನಿಗಮ ಸ್ಥಾಪನೆ ಮಾಡುತ್ತೇವೆ ಎಂದರು.

ಬಡವರ ಮಕ್ಕಳನ್ನ ಬಿಜೆಪಿಯವರು ಬಲಿ ಕೊಡುತ್ತಿದ್ದಾರೆ. ಕಟೀಲ್ ವಾಹನವನ್ನೇ ಎತ್ತಿ ಬಿಸಾಡಿದ್ರು ಮೋದಿ ಫೋಟೋವನ್ನ ಅಯನೂರು ಹಾಕಿದ್ದಾರೆ . ಶಾಂತಿಯುತಕ್ಕೆ ಶಿವಮೊಗ್ಗ ಬೆಂಬಲಿಸಿ ಎಂದು ಫೋಸ್ಟರ್ ಹಾಖಿದ್ದಾರೆ.  ಎಂಎಲ್ ಸಿ ಆಯನೂರಿಗೆ ನಾವು ಹೇಳಿದ್ದು ಅರ್ಥವಾಗಿದೆ ಎಂದು ತಿಳಿಸಿದರು.

ಪುತ್ತೂರಿನ ಕಾನೂನು ಸುವ್ಯವಸ್ಥೆ ಸಮಸ್ಯೆ ಆಗಬಹುದು ಹೀಗಾಗಿ ಅಮಿತ್ ಶಾ ರೋಡ್ ಶೋ ಕ್ಯಾನ್ಸಲ್   ಮಾಡಿದ್ದಾರೆ. ಅಮಿತ್ ಶಾರಿಗೆ ರಕ್ಷಣೆ ಕೊಡಲಾಗದೆ ಕ್ಯಾನ್ಸಲ್ ಮಾಡಿದ್ದಾರೆ. ಇದಕ್ಕಿಂತ ಅವಮಾನ ಮತ್ತೊಂದಿಲ್ಲ ಎಂದು ಡಿಕೆಶಿ ಟೀಕಿಸಿದರು.

Key words: KPCC president-DK Shivakumar -confidence -winning -10 seats – Udupi-Mangalore