ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬದುಕು,ಹೋರಾಟ ಕುರಿತ ಆಲ್ಬಂ ಸಾಂಗ್ ಬಿಡುಗಡೆ.

ಬೆಂಗಳೂರು,ಫೆಬ್ರವರಿ,11,2023(www.justkannada.in):  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದುಕು ಹೋರಾಟ ಕುರಿತ ಆಲ್ಬಂ ಸಾಂಗ್ ಇಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ಸಂಜೆ 4 ಗಂಟೆಗೆ ಬಿಡುಗಡೆಯಾಗಲಿದೆ.

ಸಿದ್ದರಾಮಯ್ಯನವರು ನಡೆದು ಬಂದ ದಾರಿಯನ್ನು ಒಂದು ಹಾಡಿನಲ್ಲಿ ಹೇಳುವ ಕೆಲಸವನ್ನು ಸಿದ್ದು ಅಪ್ಪಟ ಅಭಿಮಾನಿಯೊಬ್ಬರು ಮಾಡಿದ್ದಾರೆ. ಹಳ್ಳಿಗಾಡಿನಲ್ಲಿ ಬಡತನವನ್ನುಂಡು ಬೆಳೆದು ವಕೀಲರಾಗಿ, ಹೋರಾಟಗಾರರಾಗಿ, ರಾಜಕಾರಣಿಯಾಗಿ, ಜನಮೆಚ್ಚಿದ ಮುಖ್ಯಮಂತ್ರಿಯಾಗಿ ಆಡಳಿತದ ಅವಧಿಯಲ್ಲಿ ಸಿದ್ದರಾಮಯ್ಯ ಅವರು ನೀಡಿರುವ ಕೊಡುಗೆಗಳು ಒಂದೊಂದು ಮೈಲಿಗಲ್ಲಾಗಿದ್ದು ಇವೆಲ್ಲವನ್ನು ಹಾಡಿನ ಮೂಲಕ ಜನಮಾನಸಕ್ಕೆ ತಲುಪಿಸುವ ಕೆಲಸ ಇದಾಗಿದೆ.

ಸಿದ್ದರಾಮಯ್ಯ ಅವರ ಅಪ್ಪಟ ಅಭಿಮಾನಿ, ಮತ್ತು ನಂಬರ್ ಒನ್ ಉದ್ಯಮಿ ಎಂಬ ಖ್ಯಾತಿ ಪಡೆದಿರುವ ಹೈದ್ರಾಬಾದ್ ಮೂಲದ  ಶ್ರೀಧರ್ ರಾವ್ ರವರು ಸಿದ್ದರಾಮಯ್ಯ ಜೀವನ ಕುರಿತ ಆಲ್ಬಂ ಸಾಂಗ್ ರೆಡಿ ಮಾಡಿದ್ದಾರೆ. ಸಾಂಗ್ ಸಿದ್ಧಪಡಿಸಲು ಸಿದ್ದು ತವರಿಗೆ ತೆರಳಿ, ಅವರ ಬಾಲ್ಯದ ಬಗ್ಗೆ ಅಧ್ಯಯನ ನಡೆಸಿ ಮಾಹಿತಿಯನ್ನ ಕಲೆ ಹಾಕಿದ್ದಾರೆ.. ನಂತರ ‘ಸಿದ್ದು ಜೀವನ ಗಾನ’ ಆಲ್ಬಂ ಸಾಂಗ್ ಅ​​ನ್ನು ಕನ್ನಡ & ತೆಲುಗು ಭಾಷೆಗಳಲ್ಲಿ ಸಿದ್ದಗೊಳಿಸಿದ್ದಾರೆ.

ನಿರ್ಮಾಪಕ ಉದ್ಯಮಿ ಶ್ರೀಧರ್ ರಾವ್, ನಿವೃತ್ತ ಕೆಎಎಸ್ ಅಧಿಕಾರಿ ಡಾ.ಶಿಂಧೇ ಭೀಮ್ ಸೇನ್ ರಾವ್, ದೊಡ್ಡಬಳ್ಳಾಪುರದ ವಾಲ್ಮಿಕಿ ಗುರುಪೀಠ ಶ್ರೀ ಬ್ರಹ್ಮಾನಂದ ಸ್ವಾಮೀಜಿ, ಪ್ರೆಸ್ ಕ್ಲಬ್ ಆಪ್ ಬೆಂಗಳೂರು ಅಧ್ಯಕ್ಷ ಶ್ರೀಧರ್, ನಿರ್ದೇಶಕ ತರುಣ್ ಕೂಂಡ ಸೇರಿದಂತೆ ಇನ್ನಿತರರು ಮಾಧ್ಯಮ ಗೋಷ್ಠಿಯಲ್ಲಿ ಉಪಸ್ಥಿತರಿರುತ್ತಾರೆ.

Key words: album song -about former CM -Siddaramaiah –release-today.