Thursday, August 13, 2026

BDA Apartments

Home Front Page ‘ಪ್ರಧಾನಿ ಮೋದಿ ಆಗಮಿಸಿದ್ದರಿಂದ ಇಸ್ರೋಗೆ ಅಪಶಕುನ’: ಹೆಚ್.ಡಿಕೆ ಹೇಳಿದ್ದು ತಪ್ಪು ಎಂದ ‘ಕೈ’ ಶಾಸಕ..

‘ಪ್ರಧಾನಿ ಮೋದಿ ಆಗಮಿಸಿದ್ದರಿಂದ ಇಸ್ರೋಗೆ ಅಪಶಕುನ’: ಹೆಚ್.ಡಿಕೆ ಹೇಳಿದ್ದು ತಪ್ಪು ಎಂದ ‘ಕೈ’ ಶಾಸಕ..

ಕೊಪ್ಪಳ,ಸೆ,14,2019(www.justkannada.in): ಪ್ರಧಾನಿ ಮೋದಿ ಆಗಮಿಸಿದ್ದರಿಂದ ಇಸ್ರೋಗೆ ಅಪಶಕುನವಾಯಿತು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನೀಡಿದ್ದ ಹೇಳಿಕೆ ತಪ್ಪು ಎಂದು ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಪುರ ಖಂಡಿಸಿದ್ದಾರೆ.

ಕೊಪ್ಪಳದಲ್ಲಿ ಇಂದು ಮಾತನಾಡಿದ ಅಮರೇಗೌಡ ಬಯ್ಯಪುರ, ನಾನು ಹೆಚ್.ಡಿ ಕುಮಾರಸ್ವಾಮಿಗೆ ಬುದ್ದಿ ಹೇಳುವಷ್ಟು ದೊಡ್ಡವನಲ್ಲ. ಆದರೇ ಪ್ರಧಾನಿ ಮೋದಿ ಆಗಮಿಸಿದ್ದರಿಂದ ಇಸ್ರೋಗೆ ಅಪಶಕುನವಾಯಿತು ಎಂದು ನೀಡಿದ್ದ ಹೇಳಿಕೆ  ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು ರಾಜಕೀಯ ದುರುದ್ದೇಶದಿಂದ ಡಿ.ಕೆ ಶಿವಕುಮಾರ್ ಅವರ ಬಂಧನವಾಗಿದೆ.  ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ವಿಪಕ್ಷಗಳ ಮೇಲೆ ದಾಳಿ ಮಾಡಲಾಗುತ್ತಿದೆ. ಆದರೆ ಬಿಜೆಪಿಯ ಒಬ್ಬ ನಾಯಕನ ಮೇಲೂ ಇಡಿ ಐಟಿ ದಾಳಿ ನಡೆಸಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದರು.

ಹಾಗೆಯೇ ಡಿ.ಕೆ ಶಿವಕುಮಾರ ಬಂಧನಕ್ಕೆ ಸಿದ್ಧರಾಮಯ್ಯ ಕಾರಣ ಎಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೆ ತಿರುಗೇಟು ನೀಡಿದ ಅಮರೇಗೌಡ ಬಯ್ಯಪುರ, ಸಿದ್ದರಾಮಯ್ಯಗೂ ಡಿ.ಕೆ ಶಿವಕುಮಾರ್ ಬಂಧನಕ್ಕೂ ಯಾವುದೇ ಸಂಬಂಧವಿಲ್ಲ. ಬಿಜೆಪಿಯವರು ಈ ರೀತಿಯಾಗಿ ಸಣ್ಣತನ ತೋರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Key words: koppal- congress MLA-amaregowda bayyapur- hd kumaraswamy- pm modi