ಮುತ್ತಿನ ನಗರಿಗೆ ಹೊರಟ ‘ರಾಬರ್ಟ್’ ತಂಡ !

ಬೆಂಗಳೂರು, ಸೆಪ್ಟೆಂಬರ್ 14, 2019 (www.justkannada.in): ರಾಬರ್ಟ್ ಚಿತ್ರ ತಂಡ ಹೈದರಾಬಾದ್ ಗೆ ಶಿಫ್ಟ್ ಆಗಿದೆ.

ನಿನ್ನೆ ನಟ ದರ್ಶನ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಮತ್ತು ಸಂಭಾಷಣೆಕಾರ ರಾಜಶೇಖರ್ ಹೈದರಾಬಾದ್ ಗೆ ಪ್ರಯಾಣ ಬೆಳೆಸಿದ್ದರು.

ಇಂದಿನಿಂದ ಹೈದರಾಬಾದ್ ನಲ್ಲಿ ಶೂಟಿಂಗ್ ಪ್ರಾರಂಭವಾಗಲಿದೆ. ಇಷ್ಟು ಬೆಂಗಳೂರು ಸುತ್ತಾಮುತ್ತಾ ಚಿತ್ರೀಕರಣ ಮಾಡುತ್ತಿದ್ದ ಇದೀಗ ಮುತ್ತಿನ ನಗರಿಯತ್ತ ಮುಖಮಾಡಿದೆ.

ರಾಬರ್ಟ್ ಚಿತ್ರದ ಮುಖ್ಯವಾದ ಭಾಗಗಳನ್ನ ಹೈದರಾಬಾದ್ ನಲ್ಲಿ ಶೂಟ್ ಮಾಡಲು ಪ್ಲಾನ್ ಮಾಡಲಾಗಿದೆ. ಹೆಬ್ಬುಲಿ ಖ್ಯಾತಿಯ ಉಮಾಪತಿ ಶ್ರೀನಿವಾಸ್ ಈ ಚಿತ್ರವನ್ನ ನಿರ್ಮಿಸುತ್ತಿದ್ದು, ತರುಣ್ ಸುಧೀರ್ ನಿರ್ದೇಶನವಿದೆ.