Friday, August 28, 2026

BDA Apartments

Home Front Page ಫಿಫಾ ವಿಶ್ವಕಪ್ ಏಷ್ಯನ್ ಕ್ವಾಲಿಫೈಯರ್ ಪಂದ್ಯಕ್ಕೆ ಕೋಲ್ಕತಾ ಆತಿಥ್ಯ

ಫಿಫಾ ವಿಶ್ವಕಪ್ ಏಷ್ಯನ್ ಕ್ವಾಲಿಫೈಯರ್ ಪಂದ್ಯಕ್ಕೆ ಕೋಲ್ಕತಾ ಆತಿಥ್ಯ

ಕೋಲ್ಕತಾ, ಮಾರ್ಚ್ 03, 2020 (www.justkannada.in): ಕೋಲ್ಕತಾದ ಸಾಲ್ಟ್‌ಲೇಕ್ ಸ್ಟೇಡಿಯಂ ಫಿಫಾ ವಿಶ್ವಕಪ್ ಏಶ್ಯನ್ ಕ್ವಾಲಿಫೈಯರ್ ಪಂದ್ಯದ ಆತಿಥ್ಯವಹಿಸಿಕೊಳ್ಳಲಿದೆ.

ಜೂ.9ರಂದು ಭಾರತ ಹಾಗೂ ಅಫ್ಘಾನಿಸ್ತಾನದ ಮಧ್ಯೆ ಪಂದ್ಯ ನಡೆಯಲಿದೆ. ಏಶ್ಯನ್ ಕ್ವಾಲಿಫೈಯರ್‌ನ ‘ಇ’ ಗುಂಪಿನಲ್ಲಿ 4ನೇ ಸ್ಥಾನದಲ್ಲಿರುವ ಭಾರತ ಇನ್ನಷ್ಟೇ ಗೆಲುವಿನ ಖಾತೆ ತೆರೆಯಬೇಕಾಗಿದೆ.

ಕತರ್,ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ವಿರುದ್ಧ ಡ್ರಾ ಸಾಧಿಸಿದ್ದ ಭಾರತ ತಂಡ ಓಮಾನ್ ವಿರುದ್ಧ ಎರಡು ಪಂದ್ಯಗಳನ್ನು 1-2 ಹಾಗೂ 0-1 ಅಂತರದಿಂದ ಸೋತಿತ್ತು. ಮುಂದಿನ ಸುತ್ತಿಗೇರಲು ಭಾರತ ಉಳಿದಿರುವ ಕತರ್, ಬಾಂಗ್ಲಾ ಹಾಗೂ ಅಫ್ಘಾನ್ ವಿರುದ್ಧದ ಪಂದ್ಯವನ್ನು ಗೆಲ್ಲಲೇಬೇಕಾಗಿದೆ.