ಮಹಿಳೆಯರ ಟಿ-20 ವಿಶ್ವಕಪ್ ಕ್ರಿಕೆಟ್: ಅಸ್ಟ್ರೇಲಿಯಾ ಸೆಮೀಸ್’ಗೆ

ವೆುಲ್ಬೋರ್ನ್, ಮಾರ್ಚ್ 03, 2020 (www.justkannada.in): ನ್ಯೂಝಿಲ್ಯಾಂಡ್ ತಂಡವನ್ನು ನಾಲ್ಕು ರನ್‌ನಿಂದ ರೋಚಕವಾಗಿ ಮಣಿಸಿದ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ಐಸಿಸಿ ಮಹಿಳಾ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಸೆಮಿ ಫೈನಲ್‌ಗೆ ಅರ್ಹತೆ ಪಡೆದಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯ 5 ವಿಕೆಟ್‌ಗಳ ನಷ್ಟಕ್ಕೆ 155 ರನ್ ಗಳಿಸಿತು. ಬೆತ್ ಮೂನಿ(60,50 ಎಸೆತ, 4 ಬೌಂಡರಿ, 2 ಸಿಕ್ಸರ್)ಅರ್ಧಶತಕದ ಕೊಡುಗೆ ನೀಡಿದರು.

2012ರ ಬಳಿಕ ಒಂದು ಬಾರಿ ಸೆಮಿಫೈನಲ್ ತಲುಪಿದ್ದ ಕಿವೀಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿ ಗೆಲುವಿನ ಹೊಸ್ತಿಲಲ್ಲಿ ಎಡವಿತು. ಲೆಗ್ ಸ್ಪಿನ್ನರ್ ಜಾರ್ಜಿಯ ವೇರ್‌ಹ್ಯಾಮ್(3-17)ಹಾಗೂ ಮೆಗಾನ್ ಶುಟ್(3-28)ಕಿವೀಸ್ ತಂಡವನ್ನು ನಿಯಂತ್ರಿಸಿದರು.