Sunday, September 13, 2026

BDA Apartments

ಸಿದ್ಧರಾಮಯ್ಯಗೆ ಕೋಲಾರ ಕ್ಷೇತ್ರ ಫೈನಲ್ ಅಲ್ಲ: ಶಾಸಕ ಯತೀಂದ್ರ ಸಿದ್ಧರಾಮಯ್ಯ ...
Home Front Page ಸಿದ್ಧರಾಮಯ್ಯಗೆ ಕೋಲಾರ ಕ್ಷೇತ್ರ ಫೈನಲ್ ಅಲ್ಲ: ಶಾಸಕ ಯತೀಂದ್ರ ಸಿದ್ಧರಾಮಯ್ಯ ಹೇಳಿಕೆ.

ಸಿದ್ಧರಾಮಯ್ಯಗೆ ಕೋಲಾರ ಕ್ಷೇತ್ರ ಫೈನಲ್ ಅಲ್ಲ: ಶಾಸಕ ಯತೀಂದ್ರ ಸಿದ್ಧರಾಮಯ್ಯ ಹೇಳಿಕೆ.

ಮೈಸೂರು,ಜನವರಿ,13,2023(www.justkannada.in): ಕೋಲಾರದಲ್ಲಿ ಸ್ಪರ್ಧಿಸುವುದಾಗಿ ಮಾಜಿ ಸಿಎಂ ಸಿದ‍್ಧರಾಮಯ್ಯ ಈಗಾಗಲೇ ಘೋಷಣೆ ಮಾಡಿದ್ದು ಈ ಮಧ್ಯೆ ಸಿದ್ಧರಾಮಯ್ಯ ಅವರಿಗೆ ಕೋಲಾರ ಕ್ಷೇತ್ರವೇ ಫೈನಲ್ ಅಲ್ಲ ಎಂದು ಹೇಳಿದ್ದಾರೆ.

ಸಿದ್ಧರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ದೈವವಾಣಿ ನುಡಿದ ಹಿನ್ನೆಲೆ ಈ ಕುರಿತು ಮಾತನಾಡಿದ ಶಾಸಕ ಯತೀಂದ್ರ ಸಿದ್ಧರಾಮಯ್ಯ,  ಘೋಷಣೆ ಮಾಡಿದ ಮಾತ್ರಕ್ಕೆ ಕೋಲಾರ ಫೈನಲ್ ಅಲ್ಲ. ಕೊನೆಯ ಕ್ಷಣದಲ್ಲೂ ಕ್ಷೇತ್ರ ಬದಲಾಗಬಹುದು.  ಚುನಾವಣೆ ಘೋಷಣೆಗೆ ಇನ್ನೂ ಸಮಯವಿದೆ. ಸಿದ್ಧರಾಮಯ್ಯ ಎರಡು ಕ್ಷೇತ್ರಗಳಲ್ಲಿ ನಿಲ್ಲುವುದು ಅವರಿಗೆ ಬಿಟ್ಟಿದ್ದು. ಇದನ್ನ ಹೈಕಮಾಂಡ್ ನಿರ್ಧರಿಸುತ್ತದೆ ಎಂದರು.ಸಿದ್ಧರಾಮಯ್ಯಗೆ ಕೋಲಾರ ಕ್ಷೇತ್ರ ಫೈನಲ್ ಅಲ್ಲ yathindra

ದೈವವಾಣಿಯನ್ನ ಯಾವ ರೀತಿ ಸ್ವೀಕರಿಸಬೇಕು ಎಂದು ಯೋಚಿಸಿಲ್ಲ. ದೈವವಾಣಿಯ ಬಗ್ಗೆ ಸಿದ್ಧರಾಮಯ್ಯ ಬಳಿ ಹೇಳಿಲ್ಲ ಎಂದು ಯತೀಂದ್ರ ಸಿದ್ಧರಾಮಯ್ಯ ತಿಳಿಸಿದರು.

Key words: Kolar constituency – not -final – Siddaramaiah- MLA -Yatindra Siddaramaiah.