ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ  ಕಾಡಾನೆ ಚಿಕಿತ್ಸೆ ಫಲಿಸದೆ ಸಾವು…

ಕೊಡಗು,ಡಿ,22,2019(www.justkannada.in): ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದು ನಿತ್ರಾಣಗೊಂಡಿದ್ದ ಆನೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆಯಲ್ಲಿ ನಡೆದಿದೆ.

ಸೋಮವಾರಪೇಟೆ ತಾಲೂಕಿನ ತ್ಯಾಗತ್ತೂರು ಗ್ರಾಮದ ಕಾಫಿ ತೋಟದಲ್ಲಿ  ಈ ಘಟನೆ ನಡೆದಿದೆ. ಆಹಾರ ಅರಸಿ ಕಾಡಿನಿಂದ ನಾಡಿಗೆ  ಅಹಾರ,ನೀರು ಸಿಗದೆ ನಿತ್ರಾಣಗೊಂಡು ತ್ಯಾಗತ್ತೂರು ಗ್ರಾಮದ ಕಾಫಿ ತೋಟದಲ್ಲಿ  ಬಿದ್ದಿತ್ತು. ವೈದ್ಯ ಡಾ.ಮುಜೀಬ್ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು. ಕಾಡಾನೆ ಸಮೀಪವೇ ಉಳಿದುಕೊಂಡು ವೈದ್ಯರು ಚಿಕಿತ್ಸೆ ಮುಂದುವರೆಸಿದ್ದರು.

ಚಿಕಿತ್ಸೆಗೆ ಸ್ಪಂದಿಸದೆ ಕಾಡಾ‌ನೆ ಮೃತಪಟ್ಟಿದೆ.  ಮೂರು ದಿನಗಳಿಂದ ಚಿಕಿತ್ಸೆ ನೀಡಿದ್ರು ಪ್ರಯೋಜನವಾಗದೆ ಆನೆ ಸಾವನ್ನಪ್ಪಿದೆ.

Key words: kodagu-elephant-dies- responding – treatment