ಆರು ಮಂದಿ ದರೋಡೆಕೋರರು ಅರೆಸ್ಟ್:  ಚಿನ್ನಾಭರಣ, ಬೈಕ್ ಮತ್ತು ವ್ಯಾನ್ ಪೊಲೀಸರ ವಶಕ್ಕೆ…

ಮೈಸೂರು,ಡಿ,22,2019(www.justkannada.in):  ರಾತ್ರಿ ವೇಳೆ  ದರೋಡೆ ಮಾಡುತ್ತಿದ್ದ ಆರುಮಂದಿ  ದರೋಡೆಕೋರರನ್ನ ಮೈಸೂರಿನ ಮಂಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ನಗರದ ಮಹದೇಶ್ವರ ಬಡಾವಣೆಯ  ಮಂಜುನಾಥ್,  ಕುಂಬಾರಕೊಪ್ಪಲು ನಿವಾಸಿ  ಮಂಜು, ಕೆ.ಆರ್ ಮೊಹಲ್ಲಾ ನಿವಾಸಿ  ಶ್ರೀಧರ್, ಬನ್ನೂರು ಟೌನ್ ನಿವಾಸಿ  ಇಮ್ರಾನ್ ಪಾಷಾ, ಮೇಟಗಳ್ಳಿಯ ನಾರಾಯಣ, ಸರಸ್ವತಿಪುರಂ ನಿವಾಸಿ ಪುಟ್ಟರಾಜು ಬಂಧಿತ ಆರೋಪಿಗಳು.

ಬಂಧಿತರಿಂದ 5,68,750 ರೂ ಮೌಲ್ಯದ ಚಿನ್ನಾಭರಣ, ಪಲ್ಸರ್ ಬೈಕ್, ಕೃತ್ಯಕ್ಕೆ ಬಳಸಿದ್ದ ಓಮಿನಿ ವ್ಯಾನ್ ವಶಕ್ಕೆ ಪಡೆದಿದ್ದಾರೆ. ಮಧ್ಯರಾತ್ರಿ ಹೈವೆ ಸರ್ಕಲ್ ನಿಂದ ಜಾವಾ ಫ್ಯಾಕ್ಟರಿ ಕಡೆಗೆ ಹೋಗುವ ಹಂದಿಹಳ್ಳದ ಸರ್ಕಲ್ ಬಳಿ ಕಾರ್ಯಾಚರಣೆ ನಡೆಸಿ ಮಂಡಿ ಠಾಣಾ ಪೊಲೀಸರು ಆರುಮಂದಿಯನ್ನ ಬಂಧಿಸಿದ್ದಾರೆ.

ಬಂಧಿತರು ಬನ್ನೂರು  ಮೈಸೂರು ಸೌಥ್ ಪೊಲೀಸ್ ಠಾಣಾ ವ್ಯಾಪ್ತಿ ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಮ್ಮ ಕೈ ಚಳಕ ತೋರಿದ್ದಾರೆ ಎಂಬ ವಿಚಾರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಮೈಸೂರು ನಗರ ಡಿಸಿಪಿ ಬಿಟಿ ಕವಿತಾ, ನರಸಿಂಹ ರಾಜ ವಿಭಾಗದ ಎಸಿಪಿ ಶಿವಶಂಕರ್ ಎಂ ಅವರ ನೇತೃತ್ವದಲ್ಲಿ ಮಂಡಿ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

Key words: mysore- Six – robbers – Arrest –Police- seized- jewellery- bike