ಉದ್ಧಟತನ ಮಾಡಿದ್ರೆ ನಾನು ಕೆಟ್ಟವನಾಗ್ಬೇಕಾಗುತ್ತೆ- ಅಧಿಕಾರಿಗಳಿಗೆ ಕ್ಲಾಸ್ : ಖಡಕ್ ವಾರ್ನಿಂಗ್ ಕೊಟ್ಟ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ…..

ಕೊಡಗು,ಸೆ,23,2019(www.justkannada.in):  ವಿದ್ಯುತ್ ಕಡಿತದಿಂದ ತೊಂದರೆ ಅನುಭವಿಸುತ್ತಿದ್ದ  ಕಾಫಿ ಬೆಳೆಗಾರರ ಸಮಸ್ಯೆ ಆಲಿಸಿದ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಕಾಫಿ ಬೆಳೆಗಾರರಿಗೆ ವಿದ್ಯುತ್ ಕಡಿತ ಮಾಡದಂತೆ ಅಧಿಕಾರಿಗಳಿಗೆ ಆದೇಶ ಹೊರಡಿಸಿದರು.

ಕೊಡಗು ಪ್ರಾಕೃತಿಕ ವಿಕೋಪದ ನಿರಾಶ್ರಿತರಿಗೆ ಮನೆ ಹಸ್ತಾಂತರ ವಿಚಾರದಲ್ಲಿ ಹಲವು ದೂರು ಕೇಳಿ ಬಂದ ಹಿನ್ನೆಲೆ ಉಸ್ತುವಾರಿ ಸಚಿವ ವಿ,ಸೋಮಣ್ಣ ಕಾಲಾವಕಾಶ ಕೇಳಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಇದೇ ವೇಳೆ ಸಚಿವರ ಮುಂದೆ ನಿರಾಶ್ರಿತ ಮಹಿಳೆ ಸಮಸ್ಯೆ ಹೇಳಿಕೊಂಡು ಕಣ್ಣೀರಿಟ್ಟರು. ಮಹಿಳೆಯನ್ನು ಸಮಾಧಾನಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ಇನ್ನು ಕಾಫಿ ಬೆಳೆಗಾರರ ಸಮಸ್ಯೆ ಬಗ್ಗೆ ಆಹವಾಲು ಸ್ವೀಕರಿಸಿದ ಸಚಿವ ವಿ.ಸೋಮಣ್ಣ,  ವಿದ್ಯುತ್ ಕಡಿತ ಮಾಡದಂತೆ ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ಆದೇಶ ಹೊರಡಿಸಿದರು. ಸ್ಥಳದಿಂದಲೇ ಮೇಲಾಧಿಕಾರಿಗಳಿಗೆ ಕರೆ ಮಾಡಿ ಉದ್ದಟತನ ಮಾಡಿದ್ರೆ ನಾನು ಕೆಟ್ಟವನಾಗ್ಬೇಕಾಗುತ್ತೆ ಎಂದು ಖಡಕ್ ವಾರ್ನಿಂಗ್ ಕೊಟ್ಟರು.

ಕಾಫಿ ಬೆಳೆಗಾರರಿಗೆ ಕರೆಂಟ್ ಕಟ್ ಮಾಡಬೇಡಿ, ಬೇಕಾದ್ರೆ ರೆಕಾರ್ಡ್ ಮಾಡ್ಕೊಳ್ಳಿ. ಬಡವರು ಏನು ಕೇಳ್ತಾರೆ ಅದನ್ನು ಮಾಡಿಕೊಡಿ, ಎಲ್ಲವೂ ಕಾನೂನು ಅನ್ಬೇಡಿ. ಸಂಜೆ ಒಳಗೆ ಜನರ ಸಮಸ್ಯೆ ಬಗೆಹರಿಬೇಕು. ಇಲ್ಲದಿದ್ರೆ ನಾನು ಆಫೀಸಿಗೆ ಬರ್ತೀನಿ ಎಂದು ಸಚಿವ ವಿ,ಸೋಮಣ್ಣ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಹೊಟ್ಟೆ ಬೆಳೆಸಿಕೊಂಡು ಕೂತರೆ ಸಾಲದು ಫೀಲ್ಡ್ ವಿಸಿಟ್ ಮಾಡಿ ಎಂದ ಶಾಸಕ ಅಪ್ಪಚ್ಚು ರಂಜನ್ ರಂಜನ್ .

ಕೊಡಗು ಪಿಡ್ಲ್ಯೂಡಿ ಅಧಿಕಾರಿ ಕಾರ್ಯವೈಖರಿಗೆ ಅಸಮಧಾನ ವ್ಯಕ್ತಪಡಿಸಿದ ಶಾಸಕ ಅಪ್ಪಚ್ಚು ರಂಜನ್,  ಹೊಟ್ಟೆ ಬೆಳೆಸಿಕೊಂಡು ಕೂತರೆ ಸಾಲದು ಫೀಲ್ಡ್ ವಿಸಿಟ್ ಮಾಡಿ ಎಂದು ಕಿಡಿಕಾರಿದರು. ಇದೇ ವೇಳೆ ಶಾಸಕ ಬೋಪಯ್ಯ 94C ಅಡಿಯಲ್ಲಿ ಅಪ್ಲಿಕೇಶನ್, ಪೌತಿ ಖಾತೆ ಮಾಡದ ಬಗ್ಗೆ ಬ್ರೋಕರ್‌ಗಳ ಹಾವಳಿ ತಪ್ಪಿಸುವಂತೆ ತಹಶಿಲ್ದಾರ್‌ಗೆ ಸಚಿವ ವಿ.ಸೋಮಣ್ಣ ಸೂಚನೆ ನೀಡಿದರು.

ಹಾಗೆಯೇ ಗ್ರಾಮ ಲೆಕ್ಕಿಗ ಡೇ ಟೈಮಲ್ಲಿ ಕುಡಿತಾರೆ, ಸಂಜೆ ಬೇಕಾದ್ರೆ ಕುಡೀಲಿ. ಅವರನ್ನು ಮನೆಗೆ ಕಳಿಸಿ ಸರ್ ಎಂದು  ಶಾಸಕ ಅಪ್ಪಚ್ಚು ರಂಜನ್ ಸಚಿವ ವಿ.ಸೋಮಣ್ಣಗೆ ಮನವಿ ಮಾಡಿದರು. ಶಾಸಕರ ಮನವಿ ಆಲಿಸಿದ ಸಚಿವ ವಿ.ಸೋಮಣ್ಣ ಕುಡಿದು ಕೆಲಸ ಮಾಡುವ ವಿಎ ಮನೆಗೆ ಕಳುಹಿಸಿ ಎಂದು ತಹಶಿಲ್ದಾರ್ ಗೆ ಸೂಚಿಸಿದರು.

Key words:  Kodagu District -in charge- Minister – V. Somanna- class – officers.