ಪ್ರವಾಹದಿಂದ ಜನರು ಬದುಕು ಬೀದಿಗೆ ಬಂದಿದ್ರೂ ಸಿಎಂ ತಲೆ ಕೆಡಿಸಿಕೊಂಡಿಲ್ಲ-ಮುಖ್ಯಮಂತ್ರಿ ಬಿಎಸ್ ವೈ ವಿರುದ್ದ ಮಾಜಿ ಸಚಿವ ಸತೀಶ್ ಜಾರಕಿಹೊಳಿ ವಾಗ್ದಾಳಿ…

ಬೆಳಗಾವಿ,ಸೆ,23,2019(www.justkannada.in):  ನೆರೆಯಿಂದ ಜನರ ಬದುಕು ಬೀದಿಗೆ ಬಂದಿದ್ದರೂ ಸಿಎಂ ಬಿಎಸ್ ಯಡಿಯೂರಪ್ಪ ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

ಬೆಳಗಾವಿಯಲ್ಲಿ ಇಂದು ಮಾತನಾಡಿದ ಸತೀಶ್ ಜಾರಕಿಹೊಳಿ,  ಸಿಎಂ ಬಿಎಸ್ ಯಡಿಯೂರಪ್ಪಗೆ ಕೇವಲ ರಾಜಕಾರಣ ಬೇಕಾಗಿದೆ ಅಷ್ಟೆ.  ಅವರಿಗೆ ಅಂತರಿಕ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ಅವರು ಅಧಿಕಾರ ಅನುಭವಿಸಬೇಕಷ್ಟೆ. ಸರ್ಕಾರಕ್ಕೆ ಏನಾಗುತ್ತೋ ಎಂಬ ಆತಂಕದಲ್ಲಿ ಬಿಎಸ್ ವೈ ಇದ್ದಾರೆ. ಹೀಗಾಗಿ ಜನರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.

ಬಿಜೆಪಿಯವರು ಶ್ರಮಪಟ್ಟಿ ಅಧಿಕಾರಕ್ಕೆ ಬಂದಿಲ್ಲ. ಹೀಗಾಗಿ ಅವರಿಗೆ ಜನರ ಕಷ್ಟ ಗೊತ್ತಾಗುವುದಿಲ್ಲ. ಬಿಜೆಪಿಯಲ್ಲಿ ಅಂತರಿಕ ಸಮಸ್ಯೆ ಹೆಚ್ಚಾಗಿದ ಎಂದು ಸತೀಶ್ ಜಾರಕಿಹೊಳಿ ನುಡಿದರು.

Key words: CM –BS yeddyurappa-flood -Former minister -Satish jarkiholi