know your candidate: ಮೈಸೂರು – ಕೊಡಗು ಲೋಕಸಭಾ ಅಭ್ಯರ್ಥಿ : ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್

know your candidate, Yaduveer Krishna Datta Chamaraja Wadiyar, Mysore

 

ಮೈಸೂರು,  ಏ. 09, 2024 : (www.justkannada.in news )  ಆರು ಶತಮಾನಗಳ ಇತಿಹಾಸ ಇರುವ ಮೈಸೂರು ಯದುವಂಶದ 27ನೇ ಉತ್ತರಾಧಿಕಾರಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಮೂಲ ಹೆಸರು, ಯದುವೀ‌ರ್ ಗೋಪಾಲರಾಜ್ ಅರಸ್,

ಹುಟ್ಟಿದ್ದು 1992 ರ ಮಾ.24 , ತಂದೆ ಸ್ವರೂಪ್ ಆನಂದ್ ಗೋಪಾಲರಾಜ್ ಅರಸ್,  ತಾಯಿ ತ್ರಿಪುರಸುಂದರಿ ದೇವಿ (ಲೀಲಾ). ಯದುವೀ‌ರ್ ಬೆಂಗಳೂರಿನ ವಿದ್ಯಾನಿಕೇತನ್ ಶಾಲೆಯಲ್ಲಿ ಹತ್ತನೇ ತರಗತಿವರೆಗೆ ವ್ಯಾಸಂಗ.  ಬಳಿಕ ಕೆನೆಡಿಯನ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಹನ್ನೆರನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ನಂತರ, ಅಮೆರಿಕಾದ ಬೋಸ್ಟನ್ ಮ್ಯಾಸಚೂಸೆಟ್‌ಸ್‌ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ಮತ್ತು ಇಂಗ್ಲಿಷ್ ಪದವಿ ಗಳಿಸಿದ್ದಾರೆ.

ಶ್ರೀಕಂಠದತ್ತ ನರಸಿಂಹರಾಜ ಒಡೆಯ‌ರ್ ಅವರ ನಿಧನದ ನಂತರ ಯದುವೀರ ಅವರನ್ನು ಪ್ರಮೋದಾದೇವಿ ಒಡೆಯರ್  ದತ್ತು ಸ್ವೀಕರಿಸಿದರು. ರಾಜವಂಶಸ್ಥರಾದ ತ್ರಿಷಿಕಾ ಕುಮಾರಿ ಅವರೊಂದಿಗೆ ವಿವಾಹ . ಈ ದಂಪತಿಗೆ ಆದ್ಯವೀರ್ ನರಸಿಂಹರಾಜ ಒಡೆಯರ್ ಎಂಬ ಪುತ್ರ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ

ಫೇಸ್‌ಬುಕ್ ಮೂಲಕ ಕಾಲಕಾಲಕ್ಕೆ ತಮ್ಮ ಅಭಿಪ್ರಾಯ, ಅರಮನೆ ಆಗುಹೋಗು, ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಸ್ಟೈಲೀಶ್‌  ಯದುವೀರ

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಂತೆ ಯದುವೀರ ಸಹ ಸ್ಟೈಲಿ ವ್ಯಕ್ತಿತ್ವ ಹೊಂದಿದ್ದಾರೆ. ಬ್ರಾಡೆಂಡ್ ಶರ್ಟ್, ಪ್ಯಾಟ್, ಕನ್ನಡಕ, ವಾಚ್‌  ಜೊತೆಗೆ ರಾಜವಂಶದವರು ಧರಿಸುವ  ಕಿವಿಯೊಲೆಯನ್ನು ಧರಿಸುತ್ತಾರೆ. ದಸರ  ಸಂದರ್ಭದಲ್ಲಿ ಸಾಂಪ್ರದಾಯಿಕ ವಸ್ತ್ರಗಳ ಮೂಲಕ ಸಿಂಹಾಸನವೇರಿ ಖಾಸಗಿ ದರ್ಬಾರ್ ನಡೆಸುತ್ತಾರೆ.

ಚುನಾವಣಾ ಅಖಾಡಕ್ಕೆ ಯದುವೀರ್‌ :

ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೋಟ್ಯಾಧೀಶ್ವರ.  ಯದುವೀರ್ ಹೆಸರಿನಲ್ಲಿ ಸ್ವಂತ ವಾಹನ ಅಥವಾ ಸ್ಥಿರಾಸ್ತಿ ಇಲ್ಲ.  ಯದುವೀರ್ ಬಳಿ ಯಾವುದೇ ಕೃಷಿಭೂಮಿ , ಸ್ವಂತಮನೆ, ವಾಣಿಜ್ಯ ಕಟ್ಟಡಗಳಿಲ್ಲ. ಬ್ಯಾಂಕ್ ಗಳಲ್ಲಿ ಸಾಲ ಪಡೆದಿಲ್ಲ. ಯದುವೀರ್ ವಿರುದ್ದ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಯದುವೀರ್ ಒಟ್ಟು 4 ಕೋಟಿ 99 ಲಕ್ಷದ 59 ಸಾವಿರದ 303 ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಯಾವುದೇ ಸ್ಥಿರಾಸ್ತಿ ಹೊಂದಿಲ್ಲ.

 ಅಫಿಡವಿಟ್ ವಿವರ.

ಇದೇ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿದಿರುವ ಮೈಸೂರು ರಾಜವಂಶದ ಉತ್ತರಾಧಿಕಾರಿ ಯದುವೀರ್ ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕೆ. ನಾಮಪತ್ರ ಸಲ್ಲಿಕೆ ವೇಳೆ ಯದುವೀರ್ ಸಲ್ಲಿಸಿರುವ ಅಫಿಡವಿಟ್ ನ ವಿವರ ಹೀಗಿದೆ.

ಯದುವೀರ್ ಕೈಯಲ್ಲಿ ನಗದು 1ಲಕ್ಷ ರೂ. ಹಣವಿದ್ದರೇ ಮಡದಿ ತ್ರಿಷಿಕಾ ಕೈಯಲ್ಲಿ 75 ಸಾವಿರ ರೂ.ಗಳಿವೆ. ವಿವಿಧ ಬ್ಯಾಂಕ್ ಗಳ ಉಳಿತಾಯ ಖಾತೆಯಲ್ಲಿ ಯದುವೀರ್ ಹೆಸರಿಗೆ 23 ಲಕ್ಷದ 55 ಸಾವಿರ ನಗದು ಹಣವಿದ್ದರೆ,  ಮಡದಿ ತ್ರಿಷಿಕಾ ಹೆಸರಲ್ಲಿ  1 ಲಕ್ಷ ಬ್ಯಾಂಕ್ ಡೆಪಾಸಿಟ್ ಇಡಲಾಗಿದೆ.

ವಿವಿಧ ಕಂಪನಿ ಹಾಗೂ ಶೇರ್ ಗಳ ಮೇಲೆ ಹೂಡಿಕೆ ಮಾಡಿರುವ ವಿವರ ಹೀಗಿದೆ.

ಯದುವೀರ್ ಹೆಸರಿನಲ್ಲಿ  1ಕೋಟಿ 33 ಲಕ್ಷದ 4 ಸಾವಿರ 303 ರೂ. ಹೂಡಿಕೆ ಮಾಡಲಾಗಿದ್ದರೇ ಮಗನ ಹೆಸರಿನಲ್ಲಿ 1 ಕೋಟಿ, 49 ಲಕ್ಷದ 343 ರೂ. ಹೂಡಿಕೆ ಮಾಡಲಾಗಿದೆ.

ಚಿನ್ನ ಬೆಳ್ಳಿ ವಿವರ.

ಯದುವೀರ್ ಹೆಸರಿನಲ್ಲಿ 3ಕೋಟಿ 25 ಲಕ್ಷ ರೂ. ಮೌಲ್ಯದ  4 ಕೆ.ಜಿ ಚಿನ್ನವಿದೆ. ಯದುವೀರ್ ಹೆಸರಿನಲ್ಲಿ 14 ಲಕ್ಷ ರೂ. ಮೌಲ್ಯದ 20 ಕೆಜಿ ಬೆಳ್ಳಿ ಇದ್ದರೇ ಮಡದಿ ಹೆಸರಿನಲ್ಲಿ 7 ಲಕ್ಷ ರೂ. ಮೌಲ್ಯದ 10 ಕೆಜಿ ಬೆಳ್ಳಿ ಇದೆ. ಮಗನ ಹೆಸರಿನಲ್ಲಿ 7 ಲಕ್ಷ ರೂ. ಮೌಲ್ಯದ 10 ಕೆ.ಜಿ ಬೆಳ್ಳಿ ಇವೆ. ಒಟ್ಟಾರೇ, ಯದುವೀರ್ ಹೆಸರಿನಲ್ಲಿ 3 ಕೋಟಿ 33 ಲಕ್ಷ ರೂ., ಮಡದಿ ಹೆಸರಿನಲ್ಲಿ 1 ಕೋಟಿ ಹಾಗೂ ಮಗನ ಹೆಸರಿನಲ್ಲಿ 20 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳಿವೆ.

ಆಸ್ತಿಯ ವಿವರ.

ಯದುವೀರ್ ಹೆಸರಿನಲ್ಲಿ 4 ಕೋಟಿ 99 ಲಕ್ಷದ 59 ಸಾವಿರದ 303 ರೂ., ಮಡದಿ ತ್ರಿಷಿಕಾ ಹೆಸರಿನಲ್ಲಿ 1 ಕೋಟಿ 4 ಲಕ್ಷದ 25 ಸಾವಿರ ರೂ. ಹಾಗೂ ಪುತ್ರನ ಹೆಸರಿನಲ್ಲಿ 3 ಕೋಟಿ 63 ಲಕ್ಷದ 55 ಸಾವಿರದ 343 ರೂ. ಹೊಂದಿದ್ದಾರೆ.

key words : know your candidate, Yaduveer Krishna Datta Chamaraja Wadiyar, Mysore

ENGLISH SUMMARY : 

Yaduveer Krishna Datta Chamaraja Wadiyar was the 27th successor of the Yadu Dynasty of Mysore, which has a history of six centuries. Yaduveer Krishna Datta Chamaraja Wadiyar’s original name was Yaduveer Gopalraj Urs,

Like Srikanta Datta Narasimha raja Wadiyar, Yaduveer also has a stylish personality. They wear a branded shirt, pat, glasses, watch as well as earrings worn by the royal family. On the occasion of Dussehra, they ascend the throne in traditional attire and hold a private durbar.