ಮತದಾನ ಮಹತ್ವ ಸಾರಲು ಕೆಎಂಎಫ್ ವಿನೂತನ ಪ್ರಯತ್ನ: ಗ್ರಾಹಕರಿಂದ ಮೆಚ್ಚುಗೆ.

ಬೆಂಗಳೂರು,ಏಪ್ರಿಲ್,6,2024 (www.justkannada.in): ಲೋಕಸಭೆ ಚುನಾವಣೆ ಹಿನ್ನೆಲೆ  ಮತದಾನದ ಮಹತ್ವ ಸಾರಲು ಜನಜಾಗೃತಿ ಮೂಡಿಸಲು ಕೆಎಂಎಫ್ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.

ಹೌದು,  ಹಾಲು, ಮೊಸರು, ಮಜ್ಜಿಗೆ, ಲಸ್ಸಿ ಪ್ಯಾಕೆಟ್ ಗಳ ಮೂಲಕವೂ ಮತದಾನದ ಮಹತ್ವ ಸಾರಲು ಕೆಎಂ ಎಫ್ ಮುಂದಾಗಿದೆ. ಚುನಾವಣೆಯಿಂದ ಚುನಾವಣೆಗೆ ಮತದಾನದ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆ, ಅದರಲ್ಲೂ ನಗರ ಪ್ರದೇಶದಲ್ಲಿ ಮತದಾನ ಮಾಡಲು ಮತದಾರರು ನಿರ್ಲಕ್ಷ್ಯ ತೋರುತ್ತಿದ್ದು, ಹೀಗಾಗಿ ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಭಿನ್ನ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

ಇದೀಗ ಕೆಎಂಎಫ್ ನಿಂದ ಮತದಾನದ ಮಹತ್ವ ಸಾರಲು ಜನಜಾಗೃತಿ ಮೂಡಿಸುತ್ತಿದ್ದು, ನಂದಿನಿ ಹಾಲು,‌ ಮೊಸರು, ಮಜ್ಜಿಗೆ, ಲಸ್ಸಿ ಪ್ಯಾಕೆಟ್ ಗಳ ಮೇಲೆ ಮತದಾನ ಮಾಡುವಂತೆ ಜನಜಾಗೃತಿ ಮೂಡಿಸುವ ಸಂದೇಶ ಮುದ್ರಣ ಮಾಡಲಾಗುತ್ತಿದೆ.

ಇದೇ ಏಪ್ರಿಲ್ 26ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ತಪ್ಪದೇ ಮತ ಚಲಾವಣೆ ಮಾಡುವಂತೆ ಹಾಲು, ಮೊಸರು, ಮಜ್ಜಿಗೆ, ಲಸ್ಸಿ ಪೊಟ್ಟಣಗಳ ಮೇಲೆ ಮುದ್ರಿಸುವ ಮೂಲಕ ಸಂದೇಶ ರವಾನೆ ಮಾಡುತ್ತಿದೆ.  ಮತದಾನದ ಮಹತ್ವ ಸಾರಲು ಕೆಎಂಎಫ್ ಮಾಡಿರುವ ವಿನೂತನ ಪ್ರಯತ್ನಕ್ಕೆ ಗ್ರಾಹಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Key words: KMF, Importance, Voting