ಮೈಸೂರಿನಲ್ಲಿ 1.26 ಲಕ್ಷ ಹಣ ವಂಚಸಿದ ಪ್ರಕರಣ: ಇರಾನ್ ಮೂಲದ ಇಬ್ಬರು ಆರೋಪಿಗಳು ಅಂದರ್…

ಮೈಸೂರು,ಫೆ,27,2020(www.justkannada.in): ಮೈಸೂರಿನ ಮಾಂಡೋವಿ ಮೋಟಾರ್ಸ್ ಟ್ರೂ ವ್ಯಾಲ್ಯೂ ನಲ್ಲಿ 1.26 ಲಕ್ಷ ಹಣ ವಂಚಿಸಿ ಪರಾರಿಯಾಗಿದ್ದ ಇಬ್ಬರು ಇರಾನ್ ಮೂಲದ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ಸಯೀದ್ ರೋಸ್ತಾಮಿ ಹಾಗೂ ಸೇಬರ್ ಹೂಸೈನ್ ಬಂಧಿತ ಆರೋಪಿಗಳು. ಈ ಇಬ್ಬರು ಖತರ್ನಾಕ್ ವಂಚಕರು ಬಂಧನ ಫೆಬ್ರವರಿ 8 ರಂದು  ಮೈಸೂರಿನ ಮಾಂಡೋವಿ ಮೋಟಾರ್ಸ್ ಟ್ರೂ ವ್ಯಾಲ್ಯೂ ನಲ್ಲಿ 1.26 ಲಕ್ಷ ವಂಚನೆ ಮಾಡಿ ಪರಾರಿಯಾಗಿದ್ದರು. ಈ ಕುರಿತು ವಿಜಯನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ದೂರಿನ‌ ಮೇರೆಗೆ ಆರೋಪಿಗಳ ಸೆರೆಗೆ ಪೋಲೀಸರು ಬಲೆ ಬೀಸಿದ್ದರು. ಇದೀಗ  ಬೆಂಗಳೂರಿನಲ್ಲಿ ಇಬ್ಬರು ವಂಚಕರನ್ನು ಪೊಲೀಸರು ಬಂಧಿಸಿದ್ದಾರೆ.

Key words: 1.26 lakh -money –Fraud- case- Mysore-two -arrest