ಮಾರ್ಚ್ ತಿಂಗಳಲ್ಲಿ ‘ಖೇಲೋ ಇಂಡಿಯಾ ಯುನಿವರ್ಸಿಟಿ’ ಎರಡನೇ ಆವೃತ್ತಿ ಆಯೋಜನೆ…

ಬೆಂಗಳೂರು,ಫೆಬ್ರವರಿ,22,2021(www.justkannada.in):  ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಯುನಿವರ್ಸಿಟಿ ವತಿಯಿಂದ  ಎರಡನೇ ಆವೃತ್ತಿಯನ್ನು ಮುಂಬರುವ ಮಾರ್ಚ್ ತಿಂಗಳಲ್ಲಿ ಕರ್ನಾಟಕ ಸರ್ಕಾರ ಆಯೋಜನೆ ಮಾಡಲಾಗಿದೆ.jk

ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯ ಸಹಭಾಗಿತ್ವದಲ್ಲಿ ಈ ಕ್ರೀಡಾ ಕೂಟವನ್ನು ಆಯೋಜನೆ ಮಾಡಲಾಗಿದ್ದು, ವಿವಿಧ ರಾಜ್ಯಗಳಿಂದ ಸುಮಾರು 150ಕ್ಕೂ ಹೆಚ್ಚಿನ ವಿಶ್ವವಿದ್ಯಾಲಯಗಳು ಭಾಗವಹಿಸಲಿವೆ. ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ,ಕೇಂದ್ರ ಯುವಜನ ಸಬಲೀಕರಣ ಸಚಿವ ಕಿರಣ್ ರಿಜಿಜು ಹಾಗೂ ರಾಜ್ಯದ ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಅವರು ಮಾಹಿತಿ ನೀಡಿದರು.

ಕೇಂದ್ರ ಸರ್ಕಾರ ಕೇಲೋ ಇಂಡಿಯ ಎರಡನೇ ಆವೃತ್ತಿ ನಮ್ಮ ರಾಜ್ಯದಲ್ಲಿ ಆಯೋಜಿಸಿದ್ದು,ಜೈನ್ ವಿವಿ ಆಶ್ರಯದಲ್ಲಿ ಆಯೋಜಿಸಲು ನಿರ್ಧರಿಸಿದೆ. ಕನಕಪುರ ರಸ್ತೆಯ ಜೈನ್ ಕಾಲೇಜಿನಲ್ಲಿ ಕ್ರೀಡಾ ಕೂಟ ನಡೆಯಲಿದೆ ಎಂದು ಸಿ.ಎಂ.ಯಡಿಯೂರಪ್ಪ ಅವರು ಹೇಳಿದರು.

25 ವರ್ಷದೊಳಗಿನ ವಯೋಮಾನದವರು ಭಾಗಿಯಾಗಲಿದ್ದಾರೆ.ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯಿಂದ ನೆರವೇರಲಿದೆ. ಕ್ರೀಡಾ ಕೂಟದ ಸಂಪೂರ್ಣ ಕಾರ್ಯಕ್ರಮವನ್ನ ರಾಜ್ಯ ಸರ್ಕಾರ ಮತ್ತು ಕಾಲೇಜಿನದ್ದಾಗಿದೆ‌ ಎಂದು ತಿಳಿಸಿದರು.

ಕೇಂದ್ರ ಸರ್ಕಾರದಿಂದ ಖೇಲೋ 2ನೇ ಆವೃತ್ತಿ ಘೋಷಣೆ ಆಗಿದೆ. ರಾಜ್ಯ ಸರ್ಕಾರ ಇದಕ್ಕೆ ಸಂಪೂರ್ಣ ಸಹಕಾರ ನೀಡಲಿದೆ. ಈ ಬಗ್ಗೆ ಚರ್ಚಿಸಲು ಕ್ರೀಡಾ ಸಚಿವ ಕಿರಣ್ ರಿಜಿಜು ಬೆಂಗಳೂರಿಗೆ ಬಂದಿದ್ದರು. ಅವರನ್ನು ಬಹಳ ಸಂತೋಷದಿಂದ ಸ್ವಾಗತಿಸುತ್ತೇನೆ. ಜೈನ್ ವಿವಿಯಲ್ಲಿ ಖೇಲೋ ಇಂಡಿಯಾದಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳ ಊಟೋಪಚಾರ, ಆತಿಥ್ಯ, ಇತರೆ ಸೌಕರ್ಯಗಳ ಹೊಣೆ ರಾಜ್ಯ ಸರ್ಕಾರ ಮತ್ತು ವಿವಿಗಳು ನೋಡಿಕೊಳ್ಳಲಿವೆ ಎಂದರು.

ನಾವು ಕೆಐಯುಜಿ 2022 ಆತಿಥ್ಯ ವಹಿಸುವ ಸೌಭಾಗ್ಯ ಪಡೆದಿದ್ದೇವೆ. ಕ್ರೀಡಾಕೂಟವು ಭಾರತದ ಭವಿಷ್ಯದ ಶ್ರೇಷ್ಠ ಚಾಂಪಿಯನ್ ಗಳನ್ನು ಹುಟ್ಟು ಹಾಕಲಿದೆ ಎಂದು ನನಗೆ ವಿಶ್ವಾಸವಿದೆ. ಕರ್ನಾಟಕ ಸರ್ಕಾರವು ವಿಶ್ವವಿದ್ಯಾನಿಲಯದ ಕ್ರೀಡೆಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಡಲಿದೆ.” ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಅಲ್ಲದೆ ಈ ಭಾರಿ 17 ಕ್ರೀಡಾ ವಿಭಾಗಗಳಲ್ಲಿ ಆರು ಸಾವಿರ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಕ್ರೀಡಾ ಕೂಟವನ್ನ ಯಶಸ್ವಿಯಾಗಿ ನಡೆಸಲಾಗುವುದು. ಕರ್ನಾಟಕವನ್ನು ಆಯ್ಕೆ ಮಾಡಿಕೊಂಡಿರುವುದು ಹರ್ಷ ತಂದಿದೆ. ಮಿಶನ್ ಒಲಂಪಿಕ್ ಕ್ಯಾಂಪೇನ್  ಅಡಿಯಲ್ಲಿ ಕ್ರೀಡಾಕೂಟ ಆಯೋಜನೆ ಎಂದು ಮಾಹಿತಿ ನೀಡಿದರು. ಕರ್ನಾಟಕದಲ್ಲಿ ನಡೆಸಲು ತೀರ್ಮಾನಿಸಿದ ಭಾರತ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.

ಕೇಂದ್ರ ರಾಜ್ಯ ಕ್ರೀಡಾ ಸಚಿವ ಕಿರಣ್ ರಿಜಿಜು ಮಾತನಾಡಿ, ಇದು ಬಹಳ ಮುಖ್ಯವಾದ ವಿಚಾರ.ಕೇಂದ್ರ ಸರ್ಕಾರದ ಖೇಲೋ ಇಂಡಿಯಾ 2021 ಘೋಷಣೆ ಮಾಡಿದೆ.2015 ರಲ್ಲಿ ಪ್ರಧಾನಿ ಮೋದಿ ಅವರಿಂದ ಚಾಲನೆ ದೊರೆತಿತ್ತು ಎಂದು ಸ್ಮರಿಸಿದರು.

ಮೂರು ಪ್ರಮುಖ ಕ್ರೀಡೆಗಳನ್ನು ಆಯೋಜಿಸಲಾಗುತ್ತದೆ.ಖೇಲೋ ಇಂಡಿಯಾ ವಿಂಟರ್ ಗೇಮ್, ಯೂನಿವರ್ಸಿಟಿ ಗೇಮ್ ಹಾಗೂ ಯೂತ್ ಗೇಮ್ ಆಯೋಜಿಸುತ್ತಾ ಬಂದಿದ್ದೇವೆ.ಯೂನಿವರ್ಸಿಟಿ ಗೇಮ್ ಬಹಳ ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.khelo-india-university-march-second-edition-organized

ಓದುವುದರ  ಜೊತೆಯಲ್ಲಿ ಕ್ರೀಡೆ ಬಹಳ ಮುಖ್ಯ.ಕರ್ನಾಟಕದ ಜೈನ್ ವಿವಿಯಲ್ಲಿ ಕ್ರೀಡೆ ನಡೆಸಲಾಗುತ್ತದೆ.ವಿವಿ ಮೇಲೆ ನಂಬಿಕೆ ಇದೆ,ಉತ್ತಮವಾಗಿ ಆಯೋಜನೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕರ್ನಾಟಕ ಜನರಿಗೆ ಕ್ರೀಡೆಯ ಬಗ್ಗೆ ಸಾಕಷ್ಟು ಒಲವಿದೆ.ಸಿಎಂ ಯಡಿಯೂರಪ್ಪ  ಉತ್ತಮ ಆಡಳಿತ ನಡೆಸುತ್ತಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಬಹಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ನಮ್ಮದು ದೊಡ್ಡ ಹಾಗೂ ಯುವ ಜನರಿರುವ ದೇಶ. ನಾವು ಮುಂದಿನ ದಿನಗಳಲ್ಲಿ ಒಲಂಪಿಕ್‌ನಲ್ಲಿ ಉತ್ತಮ‌ಸಾಧನೆ ಮಾಡಬೇಕು.ನಮ್ಮಲ್ಲಿ ಒಳ್ಳೆಯ ಪ್ರತಿಭೆಗಳಿವೆ.ಅವರನ್ನ ಮುಂದೆ ತರುವ ಕೆಲಸ ಈ ಮೂಲಕ ನಡೆಯಲಿದೆ.

ಕಳೆದ ವರ್ಷ ಒಡಿಶಾದಲ್ಲಿ ನಡೆದ ವಿಶ್ವವಿದ್ಯಾನಿಲಯ ಕ್ರೀಡಾಕೂಟವು ಭಾರಿ ಯಶಸ್ಸನ್ನು ಕಂಡಿತು. ಉತ್ತಮ ಕ್ರೀಡಾ ಸಾಧನೆ ಹೊಂದಿರುವ ದೇಶಗಳು ತಮ್ಮ ಕ್ರೀಡಾ ತಾರೆಗಳನ್ನು ವಿಶ್ವವಿದ್ಯಾನಿಲಯ ಮಟ್ಟದ ಕ್ರೀಡಾಪಟುಗಳಿಂದ ಹೆಚ್ಚಾಗಿ ಆಕರ್ಷಿಸುತ್ತಿವೆ. ಇದಕ್ಕೆ ಉದಾಹರಣೆ ಎಂದರೆ ಯುಎಸ್ನಲ್ಲಿ ಯೂನಿವರ್ಸಿಟಿ ಗೇಮ್ಸ್ ಒಲಿಂಪಿಕ್ ಚಾಂಪಿಯನ್ ಗಳಿಗೆ ತಳಪಾಯವಾಗಿದೆ.ಎಂದರು.

ಅಲ್ಲದೆ “ಕರ್ನಾಟಕವು ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರುತ್ತಿದೆ. ಬೆಂಗಳೂರಿನಲ್ಲಿರುವ ಸೌಲಭ್ಯಗಳು ರಾಜ್ಯದ ಇತರೆ ಭಾಗಗಳಲ್ಲಿ ಸಹ ಸಿಗುವಂತಾಗಬೇಕು. ಕ್ರೀಡೆಗಳಲ್ಲಿ ಬಾರತ ಸೂಪರ್ ಪವರ್ ಆಗಬೇಕು ಎಂಬುದು ನನ್ನ ಕನಸು.” ಎಂದರು.

ಐದು ಪ್ರಮುಖ ಕ್ರೀಡೆಯನ್ನ ನಾವು ಗುರ್ತಿಸಿದ್ದೇವೆ. ಯೋಗ, ಕಲ್ಹಾರಿಪಯಟ್ ಅನ್ನುವ ಕೂಡ ಕ್ರೀಡೆಗೆ ಸೇರಿಸಲಾಗಿದೆ.ಸಾಯಿ ಸೆಂಟರ್‌ನಲ್ಲಿ ಕೋಚ್‌ಗಳನ್ನ ಗುರುತಿಸಿದ್ದೇವೆ.ಅವರು ತರಬೇತಿ ನೀಡಲಿದ್ದಾರೆ.ಉತ್ತಮವಾಗಿ ಕ್ರೀಡಾ ಕೂಟ ಆಯೋಜನೆ ಮಾಡಲಿದ್ದಾರೆ ಎಂದರು.

ಕೇಂದ್ರ ಕ್ರೀಡಾ ಇಲಾಖೆ ಎಲ್ಲಾ ರೀತಿಯ ಸಹಕಾರ ನೀಡಲಿದೆ.ಟೋಕಿಯೋ ಒಲಂಪಿಕ್ ಬಳಿಕ ಮತ್ತೆ ಬರಲಿದ್ದೇನೆ.ಲೋಗೋ ಬಿಡುಗಡೆ ಮಾಡಲಿದ್ದೇವೆ. ಇದು ದೊಡ್ಡ ನೆನಪಿನಲ್ಲಿ ಉಳಿಯುವ ಕ್ರೀಡೆಯಾಗಿ ಉಳಿಯಲಿದೆ ಎಂದು ತಿಳಿಸಿದರು. ಅರ್ಚರಿ, ಫೆನ್ಸಿಂಗ್,ಈಜು ಟೆನ್ನಿಸ್,ಅಥ್ಲೆಟಿಕ್,ವಾಲಿಬಾಲ್, ಕರಾಟೆ,ಪುಟ್ಬಾಲ್, ಬ್ಯಾಡ್ಮಿಂಟನ್,ಹಾಕಿ, ಕುಸ್ತಿ, ಮಲ್ಲಕಂಬ, ಬ್ಯಾಸ್ಕೆಟ್‌ಬಾಲ್‌, ಜುಡೋ,ಭಾರ ಎತ್ತುವಿಕೆ,ಯೋಗಸಾನ, ಬಾಕ್ಸಿಂಗ್,ಕಬ್ಬಡ್ಡಿ,ಟೇಬಲ್ ಟೆನ್ನಿಸ್ ಕ್ರೀಡೆಗಳನ್ನು ಆಯೋಜನೆ ಮಾಡಲಾಗಿದೆ.

ಇದಕ್ಕೂ ಮುನ್ನ  ಗೃಹ ಕಚೇರಿ ಕೃಷ್ಣದಲ್ಲಿ‌ ಕ್ರೀಡೆಗೆ ಸಂಬಂಧಿಸಿದ ಮೂರು ಪುಸ್ತಕಗಳ ಬಿಡುಗಡೆ ಮಾಡಲಾಯಿತು. ಎರಡನೇ ಖೇಲೊ ಇಂಡಿಯ ಯೂನಿವರ್ಸಿಟಿ ಗೇಮ್ 2021 ಕಾರ್ಯಕ್ರಮಕ್ಕೆ ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಕೇಂದ್ರ ರಾಜ್ಯ ಕ್ರೀಡಾ ಸಚಿವ ಕಿರಣ್ ರಿಜಿಜು ಚಾಲನೆ ನೀಡಿದರು.

ಒಲಂಪಿಕ್ಸ್ ಗೆ ರಾಜ್ಯದ ಐದು ಕ್ರೀಡೆಗಳು ಸೇರ್ಪಡೆ

ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ರಾಜ್ಯದ ಐದು ಕ್ರೀಡೆಗಳು ಸೇರ್ಪಡೆಯಾಗಿವೆ.ಮಲ್ಲಕಂಬ , ಯೋಗ, ಕಲ್ಹಾರಿಪಯಟ್ಡು ಸೇರಿದಂತೆ ಒಟ್ಟು ಐದು ಕರ್ನಾಟಕದ ಕ್ರೀಡೆಗಳನ್ನು ಒಲಿಂಪಿಕ್ಸ್ ಗೆ ಸೇರಿಸಲಾಗಿದೆ ಎಂದು ಕೇಂದ್ರ ಕ್ರೀಡಾ  ಯುವಜನ ಸಬಲೀಕರಣ ಸಚಿವ ಕಿರಣ್ ರಿಜಿಜು ಘೋಷಣೆ ಮಾಡಿದರು.

Key words: Khelo India University – March-Second edition- organized.