ರಾಜ್ಯಾದ್ಯಂತ ಇಂದಿನಿಂದ 6 ರಿಂದ 8ನೇ ತರಗತಿ ಶಾಲೆಗಳು ಆರಂಭ….

ಬೆಂಗಳೂರು,ಫೆಬ್ರವರಿ,22,2021(www.justkannada.in): ರಾಜ್ಯಾದ್ಯಂತ  ಇಂದಿನಿಂದ 6ರಿಂದ 8ನೇ ತರಗತಿ ಶಾಲೆಗಳು ಆರಂಭಗೊಳ್ಳುತ್ತಿದೆ.

jk

ಕೇರಳದ ಗಡಿ ಭಾಗ ಮತ್ತು ಬಿಬಿಎಂಪಿ ವ್ಯಾಪ್ತಿಯ ಶಾಲೆಗಳನ್ನು ಹೊರತುಪಡಿಸಿ ಇಂದು ರಾಜ್ಯಾದ್ಯಂತ 6ರಿಂದ 8ನೇ ತರಗತಿ ಶಾಲೆಗಳು ಆರಂಭಗೊಳ್ಳಲಿವೆ.

ಕೊರೋನಾ ಸುರಕ್ಷಿತ ಕ್ರಮ ಕೈಗೊಂಡು ಶಾಲೆ ಆರಂಭಿಸಲು ಶಿಕ್ಷಣ ಇಲಾಖೆ ಸೂಚನೆ ನೀಡಿತ್ತು. ಇದೀಗ ಶಾಲೆ ಆರಂಭಕ್ಕೂ ಎರಡು ದಿನ ಮೊದಲೇ ಶಿಕ್ಷಣ ಇಲಾಖೆಯು ಶಾಲೆಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾರ್ಗಸೂಚಿ ಮತ್ತು ವೇಳಾಪಟ್ಟಿಬಿಡುಗಡೆ ಮಾಡಿದೆ.

ಕೃಪೆ-internet

ಗಡಿಭಾಗದಲ್ಲಿ ಹಾಗೂ ನಗರದಲ್ಲಿ ಕೊರೋನಾ ಭೀತಿ ಹಿನ್ನೆಲೆಯಲ್ಲಿ  ಬೆಂಗಳೂರು ನಗರ  ಮತ್ತು ಕೇರಳದ ಗಡಿಭಾಗದ ಶಾಲೆಗಳಲ್ಲಿ 8ನೇ ತರಗತಿ ಮಾತ್ರ ಪೂರ್ಣ ಪ್ರಮಾಣದಲ್ಲಿ ನಡೆಸಬೇಕು. 6 ಮತ್ತು 7ನೇ ತರಗತಿಗೆ ವಿದ್ಯಾಗಮ ಮುಂದುವರಿಸಬೇಕು ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಕೊರೋನಾ ನಿಯಮ ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದೆ.

Key words: 6th to 8th– schools – opened state