ಕೂಲಿ ಕಾರ್ಮಿಕರಿದ್ಧ ತೂಫಾನ್ ವಾಹನ ಪಲ್ಟಿ….

ಮೈಸೂರು,ಫೆಬ್ರವರಿ,22,2021(www.justkannada.in):  ತೂಫಾನ್ ವಾಹನ ಪಲ್ಟಿಯಾಗಿ ವಾಹನದಲ್ಲಿದ್ಧ ಕೂಲಿಕಾರ್ಮಿಕರಿಗೆ  ಗಾಯಗಳಾಗಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನಲ್ಲಿ ನಡೆದಿದೆ.jk

ಎಚ್.ಡಿ.ಕೋಟೆ ತಾಲೋಕಿನ ಲಕ್ಷಿಪುರ ಬಳಿ ಈ ಘಟನೆ ಸಂಭವಿಸಿದೆ. ಶುಂಠಿ ಕೆಲಸಕ್ಕೆಂದು ಕೂಲಿ ಕಾರ್ಮಿಕರನ್ನು ವಾಹನದಲ್ಲಿ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ವಾಹನಕ್ಕೆ ಕಾಡುಹಂದಿ ಅಡ್ಡ ಬಂದಿದ್ದು, ಹಂದಿ ತಪ್ಪಿಸುವ ಯತ್ನದಲ್ಲಿ ನಿಯಂತ್ರಣ ಕಳೆದುಕೊಂಡು ವಾಹನ ಪಲ್ಟಿಯಾಗಿದೆ.mysore- Three separate- Hunsur-road accidents –death – three member

ಒಬ್ಬ ವಿಧ್ಯಾರ್ಥಿ ಸೇರಿ ಎಂಟು ಮಂದಿ ಕೂಲಿ ಕಾರ್ಮಿಕರಿಗೆ ಗಾಯಗಳಾಗಿದ್ದು, ನಾಲ್ಕು ಮಂದಿಯನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Vehicle –palty-injury- Workers-mysore