ಐಎಂಎ ಹಗರಣದಲ್ಲಿ ನನ್ನ ಪಾತ್ರ ಇಲ್ಲ : ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ

ರಾಮನಗರ,ಫೆಬ್ರವರಿ,21,2021(www.justkannada.in) : ಐಎಂಎ ಹಗರಣದಲ್ಲಿ ನನ್ನ ಪಾತ್ರ ಇಲ್ಲ. ನನ್ನ ಸಿಎಂ ಅವಧಿಯಲ್ಲಿ ಈ ಹಗರಣ ಹೊರ ಬಂದಿತ್ತು. ನಾನು ಸಿಸಿಬಿಗೆ ಈ ಹಗರಣದ ತನಿಖೆ ನಡೆಸುವಂತೆ ಆದೇಶ ಮಾಡಿದ್ದೆ. ಈ ವೇಳೆಗೆ ಆತ ದೇಶ ಬಿಟ್ಟು ದುಬೈಗೆ ಪರಾರಿಯಾಗಿದ್ದ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

jk

ಐಎಂಎ ಹಗರಣ ಕುರಿತು ಪ್ರತಿಕ್ರಿಯಿಸಿ, ನಮ್ಮ ಅಧಿಕಾರಿಗಳು ಹಗರಣದ ಆರೋಪಿಯನ್ನ ಬಂಧಿಸಿ ಕರೆತಂದಿದ್ದರು. ವಿಚಾರಣೆ ವೇಳೆ ಕುಮಾರಸ್ವಾಮಿ ಅವರಿಗೆ ಸೇರಬೇಕು ಅಂತಾ ಹಣ ಸಂಗ್ರಹಣೆ ಮಾಡಿದ್ರಂತೆ. ಆ ಹಣ ಕುಮಾರಸ್ವಾಮಿಗೆ ಸೇರಿಲ್ಲಾ ಎಂಬ ಚರ್ಚೆ ನಡೆಯುತ್ತಿದೆ. ಯಾರ ಮೇಲೆ ಬೇಕಾದರೂ ಕ್ರಮ ಕೈಗೊಳ್ಳಲಿ. ಜನರ ಹಣವನ್ನ ಲೂಟಿ ಮಾಡಿದವರಿಗೆ ಈ ಕ್ಷಣದ ವರೆಗೆ ರಕ್ಷಣೆ ಕೊಟ್ಟವನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರೋಷನ್‌ ಬೇಗ್ ಒಂದು ಬಾರಿ ಸಂಜೆ ವೇಳೆಗೆ ಕೃಷ್ಣ ಕಚೇರಿಯಲ್ಲಿದ್ದಾಗ ಒಂದು ಇಪ್ತೀಯರ್ ಕೂಟ ಇದೆ ಬರಬೇಕೆಂದು ಹಠ ಹಿಡಿದಿದ್ದರು. ಕೃಷ್ಣ ಕಚೇರಿಯಿಂದ ನಾನು ಅಲ್ಲಿಗೆ ಹೋಗಿದ್ದೆ. ಆ ವೇಳೆಗೆ ಅಲ್ಲಿ ಇಬ್ಬರು ವ್ಯಕ್ತಿಗಳು ಇದ್ದರು. ಅವರು ಯಾರು ಅಂತಾ ನನಗೆ ಗೊತ್ತಿರಲಿಲ್ಲ ಎಂದಿದ್ದಾರೆ.

ರೋಷನ್‌ ಬೇಗ್ ಅವರು ಮಾಹನ್ ದಾನಿಗಳು ಶಿಕ್ಷಣ ಸಂಸ್ಥೆಗಳಿಗೆ ಇವರಿಂದ ಧಾನ ಧರ್ಮಾ ಮಾಡಿದ್ದಾರೆ ಅಂತಾ ಹೇಳಿದ್ದರು ಅಷ್ಟೆ. ಅಲ್ಲಿಯವರೆಗೆ ಆತಾ ಯಾರು ಅಂತಾನೆ ಗೊತ್ತಿರಲಿಲ್ಲ. ನಾನೆ ತನಿಖೆಗೆ ಆದೇಶ ಮಾಡಿದ ಮೇಲೆ ನನ್ನ ಪಾತ್ರ ಎಲ್ಲಿ ಇರುತ್ತದೆ ಎಂದಿದ್ದಾರೆ.

ಒಕ್ಕಲಿಗರಿಗೆ ಮೀಸಲಾತಿ ದಾರಿ ತಪ್ಪಿ ಹೋಗುತ್ತಿರುವ ಸನ್ನಿವೇಶ

 IMA,scandal,My Character,No,Former CM,H.D.Kumaraswamy

ಒಕ್ಕಲಿಗರಿಗೆ ಮೀಸಲಾತಿ ಹೋರಾಟ ಬಂದಾಗ ಮಾತಡೋಣ. ಇದು ಎಲ್ಲೊ ಒಂದು ಕಡೆ ದಾರಿ ತಪ್ಪಿ ಹೋಗುತ್ತಿರುವ ಸನ್ನಿವೇಶಗಳು. ಇಂತಹ ವಿಷಯಗಳ ಮುಖಾಂತರ ರಾಜಕೀಯ ದುರ್ಬಳಕೆ ಮಾಡಿಕೊಳ್ಳೊದು, ಇಲ್ಲಾ ರಾಜಕೀಯವಾಗಿ ಸ್ಥಾನಮಾನ ಪಡೆಯಲು ಒಂದು ವರ್ಗ ಹೊರಟಿದೆ. ಇಂತಹ ಹೋರಾಟದಲ್ಲಿ ಭಾಗಿಯಾಗವನು ನಾನಲ್ಲ. ಇಂತಹ ವಿಷಯಗಳನ್ನ ಸಮಾಜದಲ್ಲಿ ಇಕ್ಕಟ್ಟಿಗೆ ಸಿಲುಕಿಸಿ ಸಂಘರ್ಷ ಉಂಟುಮಾಡುಲು ಹೋಗುವವನು ನಾನಲ್ಲ. ಆ ಸಮಯ ಬಂದಾಗ ಚರ್ಚೆ ಮಾಡೋಣ ಎಂದು ಹೇಳಿದರು.

key words :  IMA-scandal-My Character-No-Former CM-H.D.Kumaraswamy