Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Election 2024 ಕೋಲಾರದಲ್ಲಿ ಕೆಎಚ್ ಮುನಿಯಪ್ಪ ಸೇರಿ ಎಲ್ಲಾ ನಾಯಕರು ಒಟ್ಟಾಗಿದ್ದೇವೆ- ಸಚಿವ ಎಂ.ಸಿ ಸುಧಾಕರ್.

ಕೋಲಾರದಲ್ಲಿ ಕೆಎಚ್ ಮುನಿಯಪ್ಪ ಸೇರಿ ಎಲ್ಲಾ ನಾಯಕರು ಒಟ್ಟಾಗಿದ್ದೇವೆ- ಸಚಿವ ಎಂ.ಸಿ ಸುಧಾಕರ್.

ಕೋಲಾರ,ಏಪ್ರಿಲ್,6,2024 (www.justkannada.in): ಕೋಲಾರದಲ್ಲಿ ಕೆಎಚ್ ಮುನಿಯಪ್ಪ ಸೇರಿ ನಾವೆಲ್ಲಾ ಒಟ್ಟಾಗಿದ್ದೇವೆ. ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುತ್ತೇವೆ ಎಂದು  ಸಚಿವ ಎಂ.ಸಿ ಸುಧಾಕರ್ ತಿಳಿಸಿದರು.

ಇಂದು ಮಾತನಾಡಿದ ಸಚಿವ ಎಂ.ಸಿ ಸುಧಾಕರ್, ಕೋಲಾರದಲ್ಲಿ ಎಲ್ಲ ನಾಯಕರು ಒಗ್ಗಟ್ಟಾಗಿದ್ದೇವೆ ಎಲ್ಲರೂ ಒಂದಾಗಿ ಕಾಂಗ್ರೆಸ್ ಗೆಲ್ಲಿಸುತ್ತೇವೆ. ಕೆ.ಎಚ್ ಮುನಿಯಪ್ಪ ನಾವೆಲ್ಲಾ ಒಟ್ಟಿಗೆ ಇದ್ದೇವೆ. ಆದರೆ ಕೆಲವರು ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ ಎಂದರು.ಕೋಲಾರದಲ್ಲಿ ಕೆಎಚ್ ಮುನಿಯಪ್ಪ ಸೇರಿ ಎಲ್ಲಾ ನಾಯಕರು ಒಟ್ಟಾಗಿದ್ದೇವೆ- ಸಚಿವ ಎ...

ಲೋಕಸಭೆ ಚುನಾವಣೆಗೆ ಕೋಲಾರ ಕ್ಷೇತ್ರದಲ್ಲಿ ಟಿಕೆಟ್ ವಿಚಾರವಾಗಿ ಕಾಂಗ್ರೆಸ್ ನಲ್ಲಿ ಭಿನ್ನಮತ ಉಂಟಾಗಿತ್ತು. ಸಚಿವ ಕೆ.ಎಚ್ ಮುನಿಯಪ್ಪ ತಮ್ಮ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ಕೊಡಿಸಲು ಯತ್ನಿಸಿದ್ದರು. ಆದರೆ ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡುವುದನ್ನ ವಿರೋಧಿಸಿ ಸಚಿವ ಎಂ.ಸಿ ಸುಧಾಕರ್ ಸೇರಿ ಐವರು ಶಾಸಕರು ರಾಜೀನಾಮೆಗೆ ಮುಂದಾಗಿದ್ದರು. ಈ ವೇಳೆ ಕಾಂಗ್ರೆಸ್ ಹೈಕಮಾಂಡ್ ಕೆ.ಗೌತಮ್ ಗೆ ಟಿಕೆಟ್ ನೀಡಿದೆ.

 

Key words: KH Muniyappa – Kolar – Minister -MC Sudhakar.