ಯದುವೀರ್‌ ಪರ  ಕುವೆಂಪುನಗರದಲ್ಲಿ ಮತ ಪ್ರಚಾರ ಮಾಡಿದ ಮಾಜಿ ಮೇಯರ್‌ ಶಿವಕುಮಾರ್‌

ಮೈಸೂರು, ಏ. 06, 2024  : (www.justkannada.in news )  ಬಿಜೆಪಿ ಅಭ್ಯರ್ಥಿ ಯದುವೀರ್‌ ಪರ ಮಾಜಿ ಮೇಯರ್‌ ಶಿವಕುಮಾರ್‌ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗಿಯಾದರು. ಕುವೆಂಪು ನಗರದ 47ನೇ ವಾರ್ಡಿನಲ್ಲಿ ಮನೆಮನೆಗೆ ತೆರಳಿ ಮತಯಾಚಿಸುವ ಮೂಲಕ ಚುನಾವಣಾ ಪ್ರಚಾರ ನಡೆಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನ ಮತ್ತೊಮ್ಮೆ ಪ್ರಧಾನಿಯಾಗಿ ಮಾಡುವುದಕ್ಕಾಗಿ ನಿಮ್ಮೆಲ್ಲರ  ಸಹಕಾರ, ಬೆಂಬಲ ಅವಶ್ಯಕ ಎಂದು ಶಿವಕುಮಾರ್ ಮನವಿ ಮಾಡಿದರು.

ಮೇಯರ್‌ ಆಗಿದ್ದ ಅವಧಿಯಲ್ಲಿ ವಾರ್ಡ್‌ ನಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತರಲಾಗಿದೆ. ಪ್ರಮುಖವಾಗಿ ಅಪೋಲೋ ಆಸ್ಪತ್ರೆ ಜಂಕ್ಷನ್‌ ನಿಂದ ಸಿರಿಕಲ್ಚರ್‌  ಜಂಕ್ಷನ್‌ ತನಕ ೭ ಕೋಟಿ ರೂ. ವೆಚ್ಚದಲ್ಿ ಯುಜಿಡಿ ಕಾಮಗಾರಿ ಮಾಡಲಾಗಿದೆ. ಇದು ಸೇರಿದಂತೆ ವಾರ್ಡ್‌ ನಲ್ಲಿ ಒಟ್ಟು ೧೦ ಕೋಟಿ ರೂ. ವೆಚ್ಚದಲ್ಲಿ ಯುಜಿಡಿ ವ್ಯವಸ್ಥೆ ನಿರ್ವಹಿಸಲಾಗಿದೆ.  ವಾರ್ಡ್‌ ಗಳಲ್ಲಿ ನಿರ್ಹವಣೆ ಇಲ್ಲದೆ ಸೊರಗಿದ್ದ ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಇದಕ್ಕಾಗಿ ಒಟ್ಟು ಅಂದಾಜು ೩ ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ.  ರಸ್ತೆ ಡಾಂಬರೀಕರಣ,  ಒಳಚರಂಡಿ ವ್ಯವಸ್ಥೆ ಸೇರಿದಂತೆ ಹಲವಾರು ಮೂಲ ಸವಲತ್ತುಗಳನ್ನು ಕಲ್ಪಿಸಲು ಶ್ರಮಿಸಿದ್ದೇನೆ. ಈ ಎಲ್ಲಾ ಅಂಶಗಳು ಮತದಾರರ ಮೇಲೆ ಸಕರಾತ್ಮಕ ಪರಿಣಾಮ ಬೀರಿದೆ. ಆದ್ದರಿಂದಲೇ ಮತಯಾಚನೆಗೆ ತೆರಳಿದ್ದ ವೇಳೆ ಮತದಾರರು ಬಿಜೆಪಿ ಅಭ್ಯರ್ಥಿ ಪರ ಒಲವು ತೋರಿಸುತ್ತಿರುವುದು ಕಂಡು ಬಂದಿದೆ. ಜತೆಗೆ ಮೈಸೂರು ಮಹಾರಾಜರ ವಂಶದವರಾಗಿರುವುದು ಮತದಾರರ ಒಲವಿಗೆ ಕಾರಣವಾಗಿದೆ. ಈ ಎಲ್ಲಾ ಅಂಶಗಳು ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಕೈ ಹಿಡಿಯಲಿದೆ ಎಂಬ ವಿಶ್ವಾಸವ್ಯಕ್ತಪಡಿಸಿದರು.

ವಾರ್ಡಿನ ಬಿಜೆಪಿಯ ಹಿರಿಯ ಮುಖಂಡರು, ಮುಡಾ ಮಾಜಿ ಸದಸ್ಯೆ ಲಕ್ಷ್ಮೀದೇವಿ , ಹಿಂದುಳಿದ ಮೋರ್ಚದ ಪ್ರಧಾನ ಕಾರ್ಯದರ್ಶಿ  ಉಪೇಂದ್ರ ಕುಮಾರ್ , ಕೇಬಲ್ ಸೋಮ,  ಶಾಂತವೀರಪ್ಪ, ಅನ್ನಪೂರ್ಣ  ಸೇರಿದಂತೆ ಕಾರ್ಯಕರ್ತರು ಮನೆಮನೆಗೆ ತೆರಳಿ  ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಜನತಾದಳ ಮೈತ್ರಿ ಅಭ್ಯರ್ಥಿ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ರವರಿಗೆ ಮತ  ನೀಡುವಂತೆ ಪ್ರಚಾರ ನಡೆಸಿದರು.

key words : mysore, bjp, mayor, shivakumar, yadhuveer, election