ಕೊಚ್ಚಿಯಲ್ಲಿ ನಿಯಮ ಉಲ್ಲಂಘಿಸಿ  ಅಕ್ರಮವಾಗಿ ನಿರ್ಮಿಸಿದ್ದ ಅಪಾರ್ಟ್ ಮೆಂಟ್ ನೆಲಸಮ…

ಕೇರಳಾ,ಜ,11,2020(www.justkannada.in): ಕೇರಳಾ ಕೊಚ್ಚಿಯಲ್ಲಿ ನಿಯಮ ಉಲ್ಲಂಘಿಸಿ  ಅಕ್ರಮವಾಗಿ ನಿರ್ಮಿಸಲಾಗಿದ್ದ 18 ಅಂತಸ್ತಿನ ಅಪಾರ್ಟ್ ಮೆಂಟ್ ಅನ್ನ ನೆಲಸಮ  800 ಕೆಜಿ ಸ್ಪೋಟಕ ಬಳಸಿ ನೆಲಸಮ ಮಾಡಲಾಗಿದೆ.

ಕೇರಳಾದ ಕೊಚ್ಚಿಯಲ್ಲಿ ಅಕ್ರಮವಾಗಿ 50 ಪ್ಲಾಟ್ ಗಳನ್ನ ಹೊಂದಿದ್ದ 18 ಅಂತಸ್ಥಿನ ಅಪಾರ್ಟ್ ಮೆಂಟ್  ನಿರ್ಮಿಸಲಾಗಿತ್ತು.  ಈ ಸಂಬಂಧ ಅಕ್ರಮವಾಗಿ ನಿರ್ಮಿಸಿರುವ ಅಪಾರ್ಟ್ ಮೆಂಟ್  ತೆರವುಗೊಳಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿತ್ತು.

ಈ ಹಿನ್ನೆಲೆ ಸುಪ್ರೀಂ ಆದೇಶದ ಮೇರೆಗೆ ಇಂದು ಕೇರಳಾ ಸರ್ಕಾರ ಕಾರ್ಯಾಚರಣೆ ನಡೆಸಿ 800 ಕೆಜಿ ಸ್ಪೋಟಕ ಬಳಸಿ  350 ಫ್ಲಾಟ್ ಗಳನ್ನ ಹೊಂದಿದ್ದ ಕಟ್ಟಡ ಧ್ವಂಸ ಮಾಡಿದೆ. ಇಂದು ಎರಡು ಕಟ್ಟಡಗಳು ನೆಲಸಮ ಮಾಡಿದ್ದು ನಾಳೆ ಎರಡು ಕಟ್ಟಡಗಳ ತೆರವು ಮಾಡಲಿದೆ.

Key words: kerala – illegally built – apartment- Demolish