ಹಂಪಿ ಉತ್ಸವದಲ್ಲಿ ‘ರಾಕಿ ಬಾಯ್’

ಬಳ್ಳಾರಿ,ಜ,11,(www.justkannada.in): ಹಂಪಿ ಉತ್ಸವ ಕಾರ್ಯಕ್ರಮ ನಿನ್ನೆ  ಬಳ್ಳಾರಿಯಲ್ಲಿ ಅದ್ದೂರಿಯಾಗಿ ಉದ್ಘಾಟನೆಯಾಗಿದ್ದು, ರಾಕಿಂಗ್ ಸ್ಟಾರ್ ಯಶ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಅಭಿಮಾನಿಗಳಿಗೆ ಸಂತಸ ಉಂಟು ಮಾಡಿತ್ತು.

ಕಾರ್ಯಕ್ರಮದಲ್ಲಿ ನಟ ಯಶ್ ರನ್ನು ನೋಡಿದ ಅಭಿಮಾನಿಗಳು ತುಂಬ ಖುಷಿಯಾದರು. ಹಂಪಿಯ ಗಾಯತ್ರಿ ಪೀಠದ ಬಳಿ ಹಾಕಿರುವ ಶ್ರೀ ಕೃಷ್ಣದೇವರಾಯ ವೇದಿಕೆ ಮೇಲೆ ರಾಕಿ ಬರುತ್ತಿದ್ದ ಹಾಗೆ ಜೈಕಾರ ಜೋರಾಗಿತ್ತು. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಂಪಿ ಉತ್ಸವಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್ ಐತಿಹಾಸಿಕ ಸ್ಥಳವನ್ನು ಕಾಪಾಡುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದರು.