ಇನ್ನು ಆರು ತಿಂಗಳಲ್ಲಿ ಶಿವಸೇನೆ ನಿರ್ನಾಮ ಎಂದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ

ಬೆಂಗಳೂರು, ನವೆಂಬರ್, 24, 2019 (www.justkannada.in): ಇನ್ನು ಆರು ತಿಂಗಳಲ್ಲಿ, ಶಿವಸೇನೆ ನಿರ್ನಾಮವಾಗುತ್ತದೆ ಎಂದು ಕೇಂದ್ರ ಸಚಿವ ಡಿವಿ ಸದಾನಂದಗೌಡ ಭವಿಷ್ಯ ನುಡಿದಿದ್ದಾರೆ.

ಮಹಾರಾಷ್ಟ್ರದಲ್ಲಿ ಎನ್​​​ಸಿಪಿ ಉತ್ತಮ ಆಡಳಿತದ ಹಿನ್ನೆಲೆಯಲ್ಲಿ ಬಿಜೆಪಿ ಜೊತೆಗೆ ಬಂದಿದೆ. ಉಪ ಚುನಾವಣೆಯಲ್ಲಿ ನಾವು 15ಕ್ಕೆ 15 ಸೀಟುಗಳಲ್ಲಿ ಗೆಲವು ಸಾಧಿಸಲಿದೆ. ಕಳೆದ 30 ವರ್ಷಗಳಿಂದ ಶಿವಸೇನೆ ನಮ್ಮೊಂದಿಗೆ ಇತ್ತು. ಆದರೆ ಶಿವಸೇನೆಗೆ ತಕ್ಷಣ ಅಧಿಕಾರದ ವ್ಯಾಮೋಹ ಬಂತು. ಹಿಂದುತ್ವ ಅನ್ನುತ್ತಿದ್ದ ಶಿವಸೇನೆ ಅದರಿಂದ ಹಿಂದಕ್ಕೆ ಸರಿಯಿತು ಎಂದು ಟೀಕಿಸಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರು, ಕುಮಾರಸ್ವಾಮಿ ಅವರು ಕಾಂಗ್ರೆಸ್ ಗಿಂತ ಬಿಜೆಪಿ ಉತ್ತಮ ಅಂತಾ ಹೇಳಿದ್ದಾರೆ. ಈಗ ಎರಡು ದಿನಗಳಿಂದ ಅವರಲ್ಲಿ ಬದಲಾವಣೆ ಆಗಿದೆ. ಈಗಾಗಲೇ ಜೆಡಿಎಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಚುನಾವಣೆ ನಡೆಯುತ್ತಿರುವ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರಿದ್ದಾರೆ. ಕಾಂಗ್ರೆಸ್, ಜೆಡಿಎಸ್ ನಾಯಕರು ಕಂಗಾಲಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.