‘ಕಸ್ತೂರಿ ಮಹಲ್‌’ನ ಸಾನ್ವಿ ಫಸ್ಟ್ ಲುಕ್ ರಿಲೀಸ್

ಬೆಂಗಳೂರು, ಸೆಪ್ಟೆಂಬರ್ 29, 2020 (www.justkannada.in): ಕಸ್ತೂರಿ ಮಹಲ್‌ ಚಿತ್ರ ತಂಡ ನಾಯಕಿಯ ಫಸ್ಟ್‌ ಲುಕ್‌ ರಿಲೀಸ್‌ ಮಾಡಿದೆ.

ಹೌದು. ಇದೀಗ ಚಿತ್ರದ ಫಸ್ಟ್‌ ಲುಕ್‌ ರಿಲೀಸ್‌ ಆಗಿದ್ದು, ಈ ಬಗ್ಗೆ ಟ್ವೀಟರ್‌ನಲ್ಲಿ ಶಾನ್ವಿ ಖುಷಿಯನ್ನು ಹಂಚಿಕೊಂಡಿದ್ದಾರೆ.

ಈ ಚಿತ್ರಕ್ಕೆ ಮೊದಲು ರಚಿತಾ ರಾಮ್‌ ಆಯ್ಕೆಯಾಗಿದ್ದರು, ಆದ್ರೆ ಡೇಟ್ಸ್‌ ಹೊಂದಾಣಿಕೆಯಾಗದ ಕಾರಣ ಚಿತ್ರದಿಂದ ರಚಿತಾ ರಾಮ್‌ ಹೊರ ಬಂದಿದ್ರು, ಇನ್ನು ಆ ಜಾಗಕ್ಕೆ ಶಾನ್ವಿ ಶ್ರೀವತ್ಸ ಎಂಟ್ರಿಕೊಟ್ಟಿದ್ದರು.

ನನ್ನ ಮುಂದಿನ ಕನ್ನಡ ಚಿತ್ರ ಪ್ರಖ್ಯಾತ ನಿರ್ದೇಶಕರಾದ ದಿನೇಶ್ ಬಾಬು ಸರ್ ಅವರ #ಕಸ್ತೂರಿಮಹಲ್ ಎಂದು ನಿಮ್ಮೆಲ್ಲರಿಗೂ ತಿಳಿಸಲು ನನಗೆ ಸಂತೋಷವಾಗುತ್ತದೆ ಎಂದು ಸಾನ್ವಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.