ಬಾಂಬೆ ಹೈ ಕೋರ್ಟ್‌ನಲ್ಲಿ ಮುಂಬೈ ಪಾಲಿಕೆ ವಿರುದ್ಧ ಕಂಗನಾ ಅರ್ಜಿ ವಿಚಾರಣೆ ಇಂದು

ಬೆಂಗಳೂರು, ಸೆಪ್ಟೆಂಬರ್ 29, 2020 (www.justkannada.in): ಬಾಂಬೆ ಹೈ ಕೋರ್ಟ್‌ನಲ್ಲಿ ಕಂಗನಾ ರಣಾವತ್ ಅರ್ಜಿ ವಿಚಾರಣೆ ನಡೆಯಲಿದೆ.

ಮುಂಬೈ ಮಹಾನಗರ ಪಾಲಿಕೆ ದ್ವೇಷದಿಂದ ನನ್ನ ಕಚೇರಿ ಉರುಳಿಸಿದೆ, ನಾನು ಸೂಕ್ತ ದಾಖಲೆ ಹಾಗೂ ಪರವಾನಗಿ ಪಡೆದು ಕಟ್ಟಡ ನಿರ್ಮಿಸಿದ್ದೇನೆ. ನನಗೆ ಪರಿಹಾರ ಕೊಡಿಸಬೇಕು ಎಂದು ಮನವಿ ಮಾಡಿ ಬಾಂಬೆ ಹೈ ಕೋರ್ಟ್‌ನಲ್ಲಿ ನಟಿ ಕಂಗನಾ ಅರ್ಜಿ ಹಾಕಿದ್ದರು. ಈ ಸಂಬಂಧ ಇಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.

ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದಾರೆ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಕಚೇರಿಯನ್ನು ಮುಂಬೈ ಮಹಾನಗರ ಪಾಲಿಕೆ ನೆಲೆಸಮ ಮಾಡಲು ಮುಂದಾಗಿತ್ತು. ಕಟ್ಟಡ ನೆಲಕ್ಕೆ ಉರುಳಿಸುವ ಕಾರ್ಯಕ್ಕೂ ಚಾಲನೆ ನೀಡಿ ಅರ್ಧ ಕಟ್ಟಡ ನೆಲಸಮ ಸಹ ಮಾಡಲಾಗಿತ್ತು.

ಈ ಸಂಬಂಧ ಇಂದು ಮಧ್ಯಾಹ್ನ ಮೂರು ಗಂಟೆಗೆ ಹೈ ಕೋರ್ಟ್‌ನಲ್ಲಿ ಕಂಗನಾ ಅವರ ಅರ್ಜಿ ವಿಚಾರಣೆಗೆ ಬರಲಿದೆ. ಆಸ್ತಿಪಾಸ್ತಿ ನಾಶ ಮಾಡಿದ್ದಕ್ಕೆ 2 ಕೋಟಿ ಪರಿಹಾರ ಕೇಳಿರುವ ಕಂಗನಾ ವಿರುದ್ಧ ಮುಂಬೈ ಪಾಲಿಕೆ ಆಕ್ರೋಶಗೊಂಡಿದೆ.