ಡ್ರಗ್ ಲಿಂಕ್: ವಿಚಾರಣೆ ವೇಳೆ ಕಣ್ಣೀರು ಸುರಿಸಿದ ದೀಪಿಕಾ !

ಬೆಂಗಳೂರು, ಸೆಪ್ಟೆಂಬರ್ 29, 2020 (www.justkannada.in): ಬಾಲಿವುಡ್ ಡ್ರಗ್ ಲಿಂಕ್ ವಿಚಾರಣೆಯ ಸಮಯದಲ್ಲಿ ಮೂರು ಬಾರಿ ಕಣ್ಣೀರು ಹಾಕಿದ್ದಾರೆ ನಟಿ ದೀಪಿಕಾ ಪಡುಕೋಣೆ.

ಹೌದು. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಿಚಾರಣೆ ಪದೇ ಪದೇ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ. ಆದರೆ ಕಣ್ಣೀರು ಹಾಕುತ್ತಿದ್ದ ನಟಿಗೆ ‘ಎಮೋಷನಲ್ ಕಾರ್ಡ್’ ಬಳಸಬಾರದೆಂದು ಎನ್‌ಸಿಬಿ ಅಧಿಕಾರಿಗಳು ಖಡಕ್ ಆಗಿ ಹೇಳಿದ್ದಾರೆ ಎನ್ನಲಾಗಿದೆ.

ನಟಿಯರಾದ ಸಾರಾ ಅಲಿ ಖಾನ್ ಮತ್ತು ಶ್ರದ್ಧಾ ಕಪೂರ್ ಅವರನ್ನು ಎನ್ ಸಿ ಬಿ ತನಿಖಾ ಸಂಸ್ಥೆ ವಿಚಾರಣೆ ನಡೆಸಿದೆ.