ಕೊರೋನಾ ನಿಯಂತ್ರಣಕ್ಕೆ ಕ್ರಮ: ದಸರಾ ಆಚರಣೆ ಬಗ್ಗೆ ಮೈಸೂರು ನೂತನ ಡಿ.ಸಿ ರೋಹಿಣಿ ಸಿಂಧೂರಿ ಪ್ರತಿಕ್ರಿಯಿಸಿದ್ದು ಹೀಗೆ…?

ಮೈಸೂರು,ಸೆಪ್ಟಂಬರ್,29,2020(www.justkannada.in):  ಮೈಸೂರು ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣ ಮತ್ತು ಮುಂಬರುವ ದಸರಾ ಮಹೋತ್ಸವ ಸವಾಲಿನ‌  ಕೆಲಸವಾಗಿದೆ. ಕೊರೋನಾ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮೈಸೂರು ನೂತನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.jk-logo-justkannada-logo

ಮೈಸೂರಿನ ನೂತನ ಜಿಲ್ಲಾಧಿಕಾರಿ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಡಿಸಿ ರೋಹಿಣಿ ಸಿಂಧೂರಿ. ಬೆಂಗಳೂರಿನ ನಂತರ ಮೈಸೂರು‌ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚು  ವರದಿಯಾಗುತ್ತಿವೆ. ಕೊರೋನಾ ನಿಯಂತ್ರಣ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ. ಈಗ ತಾ‌ನೇ ಅಧಿಕಾರ ವಹಿಸಿಕೊಂಡಿದ್ದು ಅಧಿಕಾರಿಗಳ ಸಭೆ ಕರೆದು ಕೊರೊನಾ ನಿಯಂತ್ರಣ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಮುಂಬರುವ ದಸರಾ ಮಹೋತ್ಸವ ಆಚರಣೆ ನನಗೆ ಸವಾಲಿನ ಕೆಲಸವಾಗಿದೆ. ಕೋವಿಡ್ ಸಂದರ್ಭದಲ್ಲಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ದಸರಾ ಆಚರಿಸಲಾಗುತ್ತದೆ. ಹಾಸನದ ಶ್ರವಣಬೆಳಗೊಳದಲ್ಲಿ ಮಹಾ ಮಸ್ತಕಾಭಿಷೇಕ ನಡೆಸಿದ ಅನುಭವವಿದೆ. ಅಲ್ಲಿ ಹತ್ತು ದಿನಗಳಲ್ಲಿ ಐದು ಲಕ್ಷ ಜನ ಸೇರಿದ್ದರು‌. ಅದನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಅದರ ಅನುಭವದ ಆಧಾರದ ಮೇಲೆ ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುವ ವಿಶ್ವಾಸವಿದೆ ಎಂದು ರೋಹಿಣಿ ಸಿಂಧೂರಿ ನುಡಿದರು.action-corona-control-dasara-celebration-mysore-dc-rohini-sindhuri

ಮೈಸೂರು ನನಗೇನೂ ಹೊಸದಲ್ಲ‌. ನಾನು ಮೈಸೂರಿನಲ್ಲೇ ತರಬೇತಿ ಪಡೆದಿದ್ದೇನೆ. ಮೈಸೂರು ಜಿಲ್ಲೆಯ ಬಗ್ಗೆ ಸಾಕಷ್ಟು ಪರಿಚಯವಿದೆ ಎಂದು ಡಿಸಿ ರೋಹಿಣಿ ಸಿಂಧೂರಿ ಅಭಿಪ್ರಾಯ ಹಂಚಿಕೊಂಡರು.

Key words: Action -Corona –Control-Dasara- celebration-  Mysore- DC – Rohini Sindhuri