Saturday, September 19, 2026

BDA Apartments

ಎಸ್‌ಪಿಬಿಗೆ ‘ಭಾರತ ರತ್ನ’ ನೀಡಿ: ಪ್ರಧಾನಿಗೆ ಆಂಧ್ರ ಸಿಎಂ ಪತ್ರ BDA JK_Adv BDA Adv
Home Cinema ಎಸ್‌ಪಿಬಿಗೆ ‘ಭಾರತ ರತ್ನ’ ನೀಡಿ: ಪ್ರಧಾನಿಗೆ ಆಂಧ್ರ ಸಿಎಂ ಪತ್ರ

ಎಸ್‌ಪಿಬಿಗೆ ‘ಭಾರತ ರತ್ನ’ ನೀಡಿ: ಪ್ರಧಾನಿಗೆ ಆಂಧ್ರ ಸಿಎಂ ಪತ್ರ

ಬೆಂಗಳೂರು, ಸೆಪ್ಟೆಂಬರ್ 29, 2020 (www.justkannada.in): ಎಸ್‌ಪಿಬಿಗೆ ಭಾರತ ರತ್ನ ಪ್ರಶಸ್ತಿ ನೀಡಲು ಆಂಧ್ರ ಸಿಎಂ ಜಗನ್ ಒತ್ತಾಯಿಸಿದ್ದಾರೆ.

ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಸಂಬಂಧ ಪತ್ರ ಬರೆದಿದ್ದು , ಎಸ್‌ಪಿಬಿ ಎಂದು ಖ್ಯಾತವಾಗಿರುವ ಬಾಲಸುಬ್ರಹ್ಮಣ್ಯಂ ಅವರ ಹೆಸರನ್ನು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಾಗಿ ಪರಿಗಣಿಸುವಂತೆ ಕೋರಿದ್ದಾರೆ.

ಎಸ್‌ಪಿಬಿ ಅಕಾಲಿಕ ನಿಧನವು ದೇಶಾದ್ಯಂತದ ಲಕ್ಷಾಂತರ ಅಭಿಮಾನಿಗಳಿಗೆ ಮತ್ತು ಅಂತರರಾಷ್ಟ್ರೀಯ ಸಂಗೀತ ಪ್ರೇಮಿಗಳಿಗೂ ಸಾಕಷ್ಟು ಸಂಕಟವನ್ನುಂಟು ಮಾಡಿದೆ.

ಎಸ್‌ಪಿಬಿ ಅಪಾರ ಜನಪ್ರಿಯತೆ ಮತ್ತು ಜಾಗತಿಕ ಸಂಗೀತ ಕ್ಷೇತ್ರದ ಮೇಲೆ ಅವರ 50 ವರ್ಷಗಳ ಪ್ರಭಾವ ವಿಶ್ವದಾದ್ಯಂತ ಸಂಗೀತ ಅಭಿಮಾನಿಗಳಿಂದ ಗೌರವ, ಆದರಗಳನ್ನು ಪಡೆದಿದ್ದಾರೆ ಎಂದು ಜಗನ್ ಸ್ಮರಿಸಿದ್ದಾರೆ.