ಪಶುವೈದ್ಯೆ ಅತ್ಯಾಚಾರ ಪ್ರಕರಣದ ಆರೋಪಿಗಳ ಎನ್ ಕೌಂಟರ್ : ಟ್ವಿಟ್ಟರ್ ನಲ್ಲಿ ಅಪಸ್ವರ ಎತ್ತಿದ ಕಾರ್ತಿ ಚಿದಂಬರಂ……

ಚೆನ್ನೈ,ಡಿ,6,2019(www.justkannada.in0): ಹೈದರಾಬಾದ್ ನಲ್ಲಿ ಪಶುವೈದ್ಯೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಆರೋಪಿಗಳನ್ನ ಪೊಲೀಸರು ಎನ್ ಕೌಂಟರ್ ಮಾಡಿದ್ದಕ್ಕೆ ದೇಶದೆಲ್ಲಡೆ ಶ್ಲಾಘನೆ ವ್ಯಕ್ತವಾಗಿದೆ. ಆದರೆ ಆರೋಪಿಗಳನ್ನ ಎನ್ ಕೌಂಟರ್ ಮಾಡಿದ್ದ ಪೊಲೀಸರ ಕಾರ್ಯಕ್ಕೆ  ಕಾರ್ತಿ ಚಿದಂಬರಂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 ಈ ಕುರಿತು ಟ್ವೀಟ್ ಮಾಡಿರುವ  ಕಾರ್ತಿ ಚಿದಂಬರಂ, ಅತ್ಯಾಚಾರ ಮಾಡುವುದು ಅತ್ಯಂತ ಹೇಯ ಕೃತ್ಯ. ಇದನ್ನು ಕಾನೂನಿನ ಚೌಕಟ್ಟಿನಲ್ಲಿ ಪರಿಶೀಲಿಸಿ ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಅತ್ಯಾಚಾರಿಗಳನ್ನು ನಾನು ಬೆಂಬಲಿಸುವುದಿಲ್ಲ, ಆದರೆ ಎನ್ ಕೌಂಟರ್ ರೀತಿಯಲ್ಲಿ ನ್ಯಾಯ ಬೇಕಾಗಿಲ್ಲ ಎಂದು ತಿಳಿಸಿದ್ದಾರೆ.

ಆರೋಪಿಗಳ ವಿರುದ್ದ ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.  ಎನ್ ಕೌಂಟರ್ ಮೂಲಕ ಅವರನ್ನು ಹತ್ಯೆ ಮಾಡುವುದು ಸಮಾಜಕ್ಕೆ ಅಂಟಿದ ಕಳಂಕ. ಅನ್ಯಾಯಕ್ಕೊಳಗಾದವರಿಗೆ ತ್ವರಿತಗತಿಯಲ್ಲಿ ನ್ಯಾಯ ದೊರಕಿಸಿಕೊಡಬೇಕಾಗಿರುವುದು ನಿಜವಾದರೂ ಈ ರೀತಿ ಬೇಕಾಗಿಲ್ಲ ಎಂದು ಕಾರ್ತಿ ಚಿದಂಬರಂ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

Key words: Karthi Chidambaram – objections -enCounter -accused -veterinary doctor rape case- accused