ಅಲ್ಲಿನ ಪೊಲೀಸ್ ಕಮಿಷನರ್ ವಿಶ್ವನಾಥ್ ಕನ್ನಡಿಗ ಅನ್ನೊದು ನಮ್ಮ ಹೆಮ್ಮೆ-  ಶ್ಲಾಘಿಸಿದ ಡಿಸಿಎಂ ಲಕ್ಷ್ಮಣ್ ಸವದಿ…

ಬೆಳಗಾವಿ,ಡಿ,6,2019(www.justkannada.in):  ಪಶುವೈದ್ಯೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಎನ್ ಕೌಂಟರ್ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಪೊಲೀಸ್ ಕಮಿಷನರ್ ವಿಶ್ವನಾಥ್ ಅವರ ಬಗ್ಗೆ ಡಿಸಿಎಂ ಲಕ್ಷ್ಮಣ್ ಸವದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ತೆಲಂಗಾಣ ಪೊಲೀಸರ ಕಾರ್ಯ ಮೆಚ್ಚುವಂತಹದ್ದು. ಅತ್ಯಾಚಾರ ಆರೋಪಿಗಳನ್ನ ಎನ್ ಕೌಂಟರ್ ಮಾಡಿದ್ದು ಒಳ್ಳೆಯ ಸಂಗತಿ. ಅಲ್ಲಿನ ಪೊಲೀಸ್ ಕಮಿಷನರ್ ವಿಶ್ವನಾಥ್ ಕನ್ನಡಿಗ ಅನ್ನೋದು ನಮ್ಮ ಹೆಮ್ಮೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಥಣಿಯಲ್ಲಿ ಇಂದು ಮಾತನಾಡಿದ ಡಿಸಿಎಂ ಲಕ್ಷ್ಮಣ್ ಸವದಿ,  ಸ್ಥಳಪರಿಶೀಲನೆ ವೇಳೆ ಆರೋಪಿಗಳು ತಪ್ಪಿಸಿಕೊಳ್ಳುವಾಗ ಪೊಲೀಸರು ಗುಂಡು ಹಾರಿಸಿದ್ದಾರೆ. ಇದ್ದು ಒಳ್ಳೆಯ ಸಂಗತಿ. ಅಲ್ಲಿನ ಕಮಿಷನರ್ ವಿಶ್ವನಾಥ್ ನಮ್ಮ ಕನ್ನಡಿಗರಾಗಿದ್ದಾರೆ. ಇದು ದೇಶಕ್ಕೆ ಒಳ್ಳೆಯ ಸಂದೇಶ ಎಂದು ನುಡಿದರು.

Key words: veterinarian doctor-rapecase- encounter- proud – Police Commissioner- Viswanath –Kannadiga- DCM Laxman Savadi.