ಬಂದ್ ಗೆ ಮೈಸೂರಿನಲ್ಲಿ ನೀರಸ ಪ್ರತಿಕ್ರಿಯೆ.: ಮಡಿಕೇರಿಯಲ್ಲಿ ಬಸ್ ಗೆ ಕಲ್ಲು ತೂರಿದ ಕಿಡಿಗೇಡಿಗಳು…

ಮೈಸೂರು,ಜ,8,2020(www.justkannada.in):  ಕೇಂದ್ರದ ಕಾರ್ಮಿಕ ನೀತಿ ವಿರೋಧಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಮುಷ್ಕರಕ್ಕೆ ಮೈಸೂರಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಾರ್ಮಿಕ ಸಂಘಟನೆಗಳಿಂದ ಮುಷ್ಕರ ಭಾರತ್ ಬಂದ್ ಹಿನ್ನೆಲೆ, ಮೈಸೂರಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು ನಗರ ಬಹುತೇಕ ಯಾತಾಸ್ಥಿತಿಯಲ್ಲಿದೆ. ಬಂದ್ ಗೆ ಹೋಟೆಲ್ ಮಾಲಿಕರು ಬಾಹ್ಯ ಬೆಂಬಲ ಮಾತ್ರ ನೀಡಿದ್ದು ಈ ಹಿನ್ನೆಲೆ ಹೋಟೆಲ್ ಉದ್ಯಮ ಎಂದಿನಂತೆ ತೆರದಿದೆ. ಹಾಗೆಯೇ ಮೈಸೂರಿನಲ್ಲಿ ಶಾಲಾಕಾಲೇಜುಗಳಿಗೆ ರಜೆ ಇಲ್ಲ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜೀ ಶಂಕರ್ ಮಾಹಿತಿ ನೀಡಿದ್ದು ಹೀಗಾಗಿ ಶಾಲಾಕಾಲೇಜುಗಳು ಎಂದಿನಂತೆ ನಡೆಯುತ್ತಿವೆ.

ಮೈಸೂರು ನಗರದಲ್ಲಿ ಸಾರಿಗ ಸಂಚಾರ ಸಹ ಯತಾಸ್ಥಿತಿಯಲ್ಲಿದ್ದು ಎಂದಿನಂತೆ ಕೆಎಸ್  ಆರ್ ಟಿಸಿ ಬಸ್ ಸಂಚರಿಸುತ್ತಿವೆ. ಈ ನಡುವೆ  ಪೆಟ್ರೋಲ್ ಬಂಕ್, ಸಿನಿಮಾ ಥಿಯೇಟರ್,ಓಲಾ, ಉಬರ್ ಸೇವೆಗಳು ಸಹ ಕಾರ್ಯ ನಿರ್ವಹಿಸುತ್ತಿವೆ .ಬಂದ್ ಗೆ ಬ್ಯಾಂಕ್ ಗಳು ಬೆಂಬಲ ಸೂಚಿಸಿದ್ದು ಈ ಹಿನ್ನೆಲೆ ಮೈಸೂರಿನಲ್ಲಿ ಬ್ಯಾಂಕ್ ಕಾರ್ಯ ಸ್ಥಗಿತಗೊಂಡಿದೆ. ವಿವಿಧ ಕಾರ್ಮಿಕ ಸಂಘಟನೆ ಬಂದ್ ಕರೆ ನೀಡಿದ್ದವು.  ಭಾರತ್ ಬಂದ್ ಗೆ ಕೆಲವು ಸಂಘಟನೆಗಳು ಬೆಂಬಲ ಸೂಚಿದ್ದವು.

ಇನ್ನು ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಕಿಡಿಗೇಡಿಗಳು  ಬಸ್ ಗೆ ಕಲ್ಲು ತೂರಿದ ಘಟನೆ ನಡೆದಿದೆ. ನಗರದ ಹೊರವಲಯದ ಚೈನ್ ಗೇಟ್ ಬಳಿ ಕೆಎಸ್ ಆರ್ ಟಿಸಿ ಬಸ್ ಗೆ ಕಲ್ಲು ತೂರಾಟ ನಡೆಸಲಾಗಿದೆ. ಮಡಿಕೇರಿಯಿಂದ ಮೈಸೂರಿನ ಕಡೆ ಹೊರಟಿದ್ದ ಬಸ್ ಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.

Key words: no response -Mysore –labor -strick- stone- bus- Madikeri.