ವಿಚಾರಣೆಗೆ ತಡೆ: ಜಾಮೀನು ಅರ್ಜಿಯಲ್ಲಿ ಎಸಿಬಿ ವಿರುದ್ಧ ಕರ್ನಾಟಕ ಹೈಕೋರ್ಟ್ ಅವಲೋಕನಗಳು ಅಸಂಬದ್ಧ –ಸುಪ್ರೀಂಕೋರ್ಟ್

ನವದೆಹಲಿ, ಜುಲೈ,18, 2022 (www.justkannada.in): ಈವರೆಗೆ ಸಲ್ಲಿಸಿರುವ ಎಲ್ಲಾ ವರದಿಗಳನ್ನು ಮುಕ್ತಾಯಗೊಳಿಸಲು ಹಾಗೂ ಅಧಿಕಾರಿಗಳ ಸೇವಾ ಕಡತಗಳನ್ನು ಮುಕ್ತಾಯಗೊಳಿಸುವಂತೆ ಸೂಚಿಸಿ ಭಷ್ಟ್ರಾಚಾರ ನಿಗ್ರಹ ದಳದ (ಎಸಿಬಿ) ವಿರುದ್ಧ ಕರ್ನಾಟಕ ಉಚ್ಛ ನ್ಯಾಯಾಲಯದ ಏಕಸದಸ್ಯ ಪೀಠ ಹೊರಡಿಸಿರುವಂತಹ ನಿರ್ದೇಶನಗಳಿಗೆ ಸರ್ವೋಚ್ಛ ನ್ಯಾಯಾಲಯ ತಡೆ ನೀಡಿ ಆದೇಶ ಹೊರಡಿಸಿದೆ.

ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ, ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಹಾಗೂ ಹಿಮಾ ಕೋಹ್ಲಿ ಅವರನ್ನೊಳಗೊಂಡ ಸರ್ವೋಚ್ಛ ನ್ಯಾಯಾಲಯದ ತ್ರಿಸದಸ್ಯ ಪೀಠ ಇಂದು, ಆರೋಪಿಯ ಜಾಮೀನು ಮನವಿಯ ವಿಚಾರಣೆಯ ವೇಳೆ ಕರ್ನಾಟಕ ಉಚ್ಛ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರು ‘ಅಸಂಬದ್ಧ ಅವಲೋಕನ’ಗಳನ್ನು ಮಾಡಿರುವುದಲ್ಲದೆ, ಜಾಮೀನು ಅರ್ಜಿಯ ವ್ಯಾಪ್ತಿಯ ಆಚೆಗೆ ಆಲೋಚಿಸಿರುವುದಾಗಿ ತಿಳಿಸಿದೆ.

“ಆರೋಪಿಯ ವಿಚಾರಣೆಯೊಂದಿಗೆ ಸಂಪರ್ಕವಿಲ್ಲದಿರುವಂತಹ ಕರ್ನಾಟಕದ ಮಾನ್ಯ ಉಚ್ಛ ನ್ಯಾಯಾಲಯದ ಮುಂದಿರುವ ವಿಚಾರಣೆಯನ್ನು ತಡೆಹಿಡಿಯಲಾಗಿದೆ. ಆರೋಪಿಯ ಜಾಮೀನು ಅರ್ಜಿಯನ್ನು ಪರಿಗಣಿಸುವಂತೆ ನಾವು ಮಾನ್ಯ ಉಚ್ಛ ನ್ಯಾಯಾಲಯವನ್ನು ಕೋರುತ್ತಿದ್ದೇವೆ. ಮೂರು ವಾರಗಳ ನಂತರ ಮಂಡಿಸುವುದು,” ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

 ಕೃಪೆ

Live law.in

Key words: Karnataka -HC’s –Observations- ACB-Supreme Court