ಜೂನಿಯರ್ ಎನ್​ಟಿಆರ್’ಗೆ ಆ್ಯಕ್ಷನ್ ಕಟ್ ಹೇಳಲಿರುವ ಪ್ರಶಾಂತ್ ನೀಲ್

ಬೆಂಗಳೂರು, ಜುಲೈ 27, 2019 (www.justkannada.in): ನಿರ್ದೇಶಕ ಪ್ರಶಾಂತ್ ನೀಲ್​ ಕೆಜಿಎಫ್-2 ಬಳಿಕ ನಿರ್ದೇಶಿಸುವ ಸಿನಿಮಾಗೆ ಜೂ. ಎನ್​ಟಿಆರ್ ಅಭಿನಯಿಸಲಿದ್ದಾರೆ.

ಹೌದು. ‘ಉಗ್ರಂ’ ನಿರ್ದೇಶಕ ಟಾಲಿವುಡ್​ನತ್ತ ಮುಖ ಮಾಡಲಿದ್ದಾರೆ. ತೆಲುಗಿನ ಮೈತ್ರಿ ಮೂವೀಸ್ ಸಂಸ್ಥೆಯು ‘ಕೆ.ಜಿ.ಎಫ್’ ನಿರ್ದೇಶಕನ ಡೇಟ್​ ಪಡೆಯಲು ಯಶಸ್ವಿಯಾಗಿದೆ.

ಈಗಾಗಲೇ ನಿರ್ಮಾಪಕರ ಕಡೆಯಿಂದ ಪ್ರಿ ಪ್ರೊಡಕ್ಷನ್ ಕೆಲಸಗಳು ಪ್ರಾರಂಭವಾಗಿದ್ದು, ಚಾಪ್ಟರ್-2 ಬಳಿಕ ಪ್ರಶಾಂತ್ ನೀಲ್ ಈ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ ಎನ್ನಲಾಗಿದೆ.