ಪಾದಚಾರಿಗಳು, ಸೈಕಲ್ ಚಾಲಕರಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಕರಡು ಮಸೂದೆಯನ್ನು ರಚಿಸಿದ ಮೊದಲ ರಾಜ್ಯ ಕರ್ನಾಟಕ

ಬೆಂಗಳೂರು, ಡಿಸೆಂಬರ್ 30, 2021 (www.justkannada.in): ರಾಜ್ಯ ಸರ್ಕಾರ, ರಾಜ್ಯದ ಎಲ್ಲಾ ನಗರಗಳಲ್ಲಿಯೂ ಪಾದಚಾರಿಗಳು ಮತ್ತು ಸೈಕಲ್ ಸವಾರರ ಹಕ್ಕುಗಳನ್ನು ಖಾತ್ರಿಪಡಿಸುವ ಮಸೂದೆಯೊಂದನ್ನು ರಚಿಸಲು ಹೊರಟಿದ್ದು, ಇದು ಇಡೀ ದೇಶದಲ್ಲಿಯೇ ಈ ರೀತಿಯ ಮಸೂದೆಯೊಂದನ್ನು ರಚಿಸಿರುವ ಮೊಟ್ಟ ಮೊದಲ ರಾಜ್ಯ ಎನಿಸಿಕೊಳ್ಳಲಿದೆ.

ನಗರ ಭೂಸಾರಿಗೆ ನಿರ್ದೇಶನಾಲಯ (ಡಿಯುಎಲ್‌ಟಿ), ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ (ಯುಎಲ್‌ಬಿಗಳು) ನಗರದ ಮೂಲಭೂತಸೌಕರ್ಯವನ್ನು ಪಾದಚಾರಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ವಿನ್ಯಾಸಪಡಿಸುವಂತೆಯೂ ಹಾಗೂ ಇದಕ್ಕೆ ವಿಫಲವಾದರೆ ದಂಡ ನಿಗಧಿಪಡಿಸುವಂತಹ ‘ಸಕ್ರಿಯ ಚಾಲನಾ ಮಸೂದೆ, ಕರ್ನಾಟಕ ೨೦೨೧’ (Active Mobility Bill, Karnataka 2021) ಅನ್ನು ಪ್ರಕಟಿಸಿದೆ.

ಈ ಮಸೂದೆಯು ಪಾದಚಾರಿಗಳಿಗೆ ಹಾಗೂ ಸೈಕಲ್ ಸವಾರರಿಗೆ ಸುರಕ್ಷಿತ ಹಾಗೂ ದೊರಕುವಂತಹ ಪರಿಸರವನ್ನು ಸೃಷ್ಟಿಸುವ ಪ್ರಯತ್ನದ ಜೊತೆಗೆ ರಸ್ತೆಗಳಲ್ಲಿ ಸಮಾನ ಸ್ಥಳಾವಕಾಶವನ್ನು ಒದಗಿಸಲು ಒತ್ತು ನೀಡಿದೆ. ಬಹುಪಾಲು ರಸ್ತೆ ಅಪಘಾತಗಳಲ್ಲಿ ಪಾದಚಾರಿಗಳು ಹಾಗೂ ಸೈಕಲ್ ಸವಾರರೇ ಸಂತ್ರಸ್ತರರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಪಾದಚಾರಿಗಳು ಹಾಗೂ ಸೈಕಲ್ ಸವಾರರು ಪ್ರಮುಖ ಸಂಭವನೀಯ ಸಂತ್ರಸ್ತರು ಎಂದು ಪರಿಗಣಿಸಿದೆ.

ಈ ಹಿನ್ನೆಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳು ನಗರಗಳ ಮೂಲಭೂತಸೌಕರ್ಯಗಳನ್ನು ವಿನ್ಯಾಸಪಡಿಸುವಾಗ, ಅದರಲ್ಲಿಯೂ ವಿಶೇಷವಾಗಿ ರಸ್ತೆಗಳ ದುರಸ್ತಿ, ವಿನ್ಯಾಸ ಹಾಗೂ ನಿರ್ಮಾಣ ಮಾಡುವಾಗ ಸಾಕಷ್ಟು ಅಳತೆಯ ಪಾದಚಾರಿ ಮಾರ್ಗ ಹಾಗೂ ಸೈಕಲ್ ಪಥಗಳಿಗೂ ಸಹ ಸ್ಥಳಾವಕಾಶವನ್ನು ಕಡ್ಡಾಯವಾಗಿ ಮಾಡಬೇಕೆಂದು ಈ ಮಸೂದೆ ಸೂಚಿಸುತ್ತದೆ.

ಮೂಲಭೂತಸೌಕರ್ಯಗಳ ಕಾಮಗಾರಿಗಳ ತಪಾಸಣೆಗೆ ಅವಕಾಶವನ್ನು ಒದಗಿಸುವುದರ ಜೊತೆಗೆ ಈ ಮಸೂದೆಯು, ಈ ನಿಯಮಗಳ ಪಾಲನೆಯಲ್ಲಿ ಲೋಪಗಳಾದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರನ್ನೂ ಒಳಗೊಂಡಂತೆ ಸಂಬಂಧವಟ್ಟವರ ವಿರುದ್ಧ ರೂ.೨ ಲಕ್ಷದವರೆಗೆ ದಂಡವನ್ನು ವಿಧಿಸುವಂತೆಯೂ ಸೂಚಿಸುತ್ತದೆ. ಈ ನಿಯಮಗಳ ಅನುಸರಣೆಯನ್ನು ಮಾಡದಿರುವುದು ಮುಂದುವರೆದಲ್ಲಿ ಹೆಚ್ಚುವರಿಯಾಗಿ ಪ್ರತಿ ದಿನಕ್ಕೆ ರೂ.೫,೦೦೦ ದಂಡ ವಿಧಿಸಬಹುದಾಗಿದೆ.

ಈ ಕರಡು ಮಸೂದೆಯನ್ನು ಪ್ರಗತಿಪರ ಎಂದು ವರ್ಣಿಸಿರುವ ಜನಾಗ್ರಹ ಎಂಬ ಸರ್ಕಾರೇತರ ಸಂಸ್ಥೆಯ ನಾಗರಿಕ ಭಾಗವಹಿಸುವಿಕೆಯ ವಿಭಾಗದ ಮುಖ್ಯಸ್ಥರಾದ ಶ್ರೀನಿವಾಸ ಅಲವಿಲಿ ಅವರು, ಈ ಮಸೂದೆಯು ಪಾದಚಾರಿಗಳು ಹಾಗೂ ಸೈಕಲ್ ಸವಾರರ ಹಕ್ಕುಗಳಿಗೆ ನ್ಯಾಯವನ್ನು ಒದಗಿಸುವ ಭರವಸೆಯನ್ನು ಮೂಡಿಸಿದೆ ಎಂದಿದ್ದಾರೆ. ಈ ಸಂಬAಧ ರಾಜ್ಯದ ಎಲ್ಲಾ ನಗರಗಳು ಹಾಗೂ ಪಟ್ಟಣಗಳಲ್ಲಿಯೂ ಚರ್ಚೆಯನ್ನು ಏರ್ಪಡಿಸಬೇಕೆಂದೂ ಸಹ ಅವರು ಶಿಫಾರಸ್ಸು ಮಾಡಿದ್ದಾರೆ.

“ಪ್ರಸ್ತುತ ನಗರಗಳ ರಸ್ತೆಗಳಲ್ಲಿ ಪಾದಚಾರಿಗಳು ಓಡಾಡುವಂತೆಯೇ ಇಲ್ಲ. ಎಷ್ಟೊಂದು ಜನರು ಸೈಕಲ್‌ನಲ್ಲಿ ಓಡಾಡಲು ಬಯಸುತ್ತಾರೆ. ಆದರೆ ಸುರಕ್ಷತೆಯ ಭಯದಿಂದ ಹಿಂಜರಿಯುತ್ತಾರೆ. ಬಿಗಡಾಯಿಸುತ್ತಿರುವ ವಾತಾವರಣದ ಬಿಕ್ಕಟ್ಟಿನ ವಿರುದ್ಧ ನಡಿಗೆ ಹಾಗೂ ಸೈಕಲ್ ಸವಾರಿ ನಮ್ಮ ಮುಂದಿರುವ ಅತ್ಯುತ್ತಮ ಆಯುಧಗಳಾಗಿವೆ,” ಎಂದು ಅಭಿಪ್ರಾಯಿಸಿದ್ದಾರೆ.

ನಗರಗಳಲ್ಲಿ ಮೂಲಭೂತಸೌಕರ್ಯ ಅಭಿವೃದ್ಧಿಪಡಿಸುವುದಕ್ಕೆ ಸಂಬAಧಿಸಿದAತೆ ಇರುವ ದೂರದೃಷ್ಟಿಯ ಕೊರೆತೆಯಿಂದಾಗಿ, ಅದರಲ್ಲಿಯೂ ವಿಶೇಷವಾಗಿ ಸಾರ್ವಜನಿಕ ಸಾರಿಗೆ ಹಾಗೂ ನಾನ್-ಮೋಟಾರೆಬಲ್ ಸಾರಿಗೆ ಆಯ್ಕೆಗಳ ಕೊರತೆಯಿಂದಾಗಿ ಭಾರತೀಯ ನಗರಗಳು ಖಾಸಗಿ ವಾಹನಗಳಿಂದ ತುಂಬಿ ಹೋಗಿವೆ. ಆದರೆ ಈ ಮಸೂದೆಯು, ಕೇವಲ ಸ್ಥಳೀಯರ ಖಾಸಗಿ ವಾಹನಗಳಿಗೆ ಮಾತ್ರ ಅವಕಾಶ ನೀಡಿ, ಇತರೆ ವಾಹನಗಳ ಓಡಾಟವನ್ನು ನಿಯಂತ್ರಿಸುವ ಮೂಲಕ ಪಾದಚಾರಿಗಳಿಗೆ ಸ್ಥಳಾವಕಾಶವನ್ನು ಸೃಷ್ಟಿಸುವ ಭರವಸೆಯನ್ನು ನೀಡುತ್ತದೆ,” ಎಂದಿದ್ದಾರೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Karnataka – first state – bill -protect -pedestrians -cyclists