ಕುವೆಂಪು ಏನು ಹೇಳಿದಾರೆ ಗೊತ್ತಾ: ಮನೋಜ್ ಜೈನ್ ಗೆ ಸಿಎಂ ಹೇಳಿದ ಕುವೆಂಪು ಪಾಠ

Karnataka chief minister Siddaramaiah about kuvempu

 

ಬೆಂಗಳೂರು, ಜು.09,2024: (www.justkannada.in news) ಯಾವುದಾದರೂ ಇಂಗ್ಲಿಷ್ ಪದಕ್ಕೆ ಕನ್ನಡದಲ್ಲಿ ಸೂಕ್ತ ಪದ ಇಲ್ಲದಿದ್ದರೆ ಅದನ್ನು ಇಂಗ್ಲಿಷ್ ನಲ್ಲೇ ಬಳಸಬೇಕು ಎಂದು ಕುವೆಂಪು ಹೇಳಿದಾರೆ ಗೊತ್ತಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು DC-CEO ಗಳ ಸಭೆಯಲ್ಲಿ ಪ್ರಸ್ತಾಪಿಸಿದ ಪ್ರಸಂಗ ನಡೆಯಿತು.

ಅಲ್ಪಸಂಖ್ಯಾತ ಇಲಾಖೆ ಚರ್ಚೆ ನಡೆಯುವ ಸಂದರ್ಭದಲ್ಲಿ ಕಾರ್ಯದರ್ಶಿ ಮನೋಜ್ ಜೈನ್ ಅವರು “ಇಂಡೀಕರಣ” ಪದ ಬಳಸಿದರು.

ಈ ವೇಳೆ ಮುಖ್ಯಮಂತ್ರಿಗಳು ಕುವೆಂಪು ಅವರ ಮಾತನ್ನು ಪ್ರಸ್ತಾಪಿಸಿ, ಇಂಡೀಕರಣ ಎಂದರೆ ಹೆಚ್ಚಿನವರಿಗೆ ಅರ್ಥ ಆಗುವುದಿಲ್ಲ. ಹೀಗಾಗಿ Mutation ಪದವನ್ನೇ ಬಳಸಿ ಎನ್ನುತ್ತಾ, “ಯಾವುದಾದರೂ ಇಂಗ್ಲಿಷ್ ಪದಕ್ಕೆ ಕನ್ನಡದಲ್ಲಿ ಸೂಕ್ತ ಪದ ಇಲ್ಲದಿದ್ದರೆ ಅದನ್ನು ಇಂಗ್ಲಿಷ್ ನಲ್ಲೇ ಬಳಸಬೇಕು ಎಂದು ಕುವೆಂಪು ಹೇಳಿದಾರೆ ಗೊತ್ತಾ” ಎಂದು ಕಿರು ಪಾಠ ಮಾಡಿದರು.

ಇಡೀ ಸಭೆ ಕುವೆಂಪು ಪಾಠವನ್ನು ಸಂಭ್ರಮಿಸಿತು.‌

  • ವಕ್ಫ್‌ ಆಸ್ತಿ ಒತ್ತುವರಿ ತೆರವಿಗೆ ಸೂಚನೆ:

ವಕ್ಫ್‌ ಆಸ್ತಿ ಒತ್ತುವರಿ ತೆರವುಗೊಳಿಸುವ ಕಾರ್ಯವನ್ನು ಜಿಲ್ಲಾಧಿಕಾರಿಗಳು ಚುರುಕುಗೊಳಿಸಬೇಕು: ಸಿಎಂ ಸೂಚನೆ . ರಾಜ್ಯದಲ್ಲಿ 217 ವಕ್ಫ್‌ ಆಸ್ತಿಗಳ ಒತ್ತುವರಿ ತೆರವು ಕಾರ್ಯ ಬಾಕಿಯಿದೆ. 22581 ವಕ್ಫ್‌ ಖಾತೆ ಮ್ಯುಟೇಶನ್‌ ಬಾಕಿಯಿದ್ದು, ಇದನ್ನು ತ್ವರಿತಗೊಳಿಸಬೇಕು. ನ್ಯಾಯಾಲಯಗಳಲ್ಲಿ ತಡೆ ಇರುವ ಪ್ರಕರಣಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಪ್ರಧಾನಮಂತ್ರಿ 15 ಅಂಶಗಳ ಕಾರ್ಯಕ್ರಮವನ್ನು ಸಮರ್ಪಕವಾಗಿ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಬೇಕು ಎಂದರು.

key words: Karnataka, chief minister, Siddaramaiah, about kuvempu