ಪ್ರವಾಸಿಗರ ಕೈ ಬೀಸಿ ಕರೆಯುತ್ತಿದೆ ಅಬ್ಬಿ ಫಾಲ್ಸ್: ಶಿಥೀಲಗೊಂಡ ವೀವ್ ಪಾಯಿಂಟ್ ದುರಸ್ತಿಗೆ ಆಗ್ರಹ

ಮಡಿಕೇರಿ,ಜುಲೈ,9,2024 (www.justkannada.in): ಕೊಡಗು ಭಾಗದಲ್ಲಿ ವರುಣ ಅಬ್ಬರ ಜೋರಾಗಿದ್ದು ಮಳೆರಾಯನ ಆರ್ಭಟದಿಂದಾಗಿ ಮಡಿಕೇರಿಯ ಅಬ್ಬಿ ಜಲಪಾತ ಧುಮ್ಮಿಕ್ಕುತ್ತಿದೆ.  ಹಾಲ್ನೊರೆಯಂತ ಅಬ್ಬಿ ಜಲಪಾತದ ಜಲಾರಾಶಿಯ ರಮಣಿಯದೃಶ್ಯ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ.

ಅಬ್ಬಿ ಜಲಪಾತದ ಬಳಿ ಇರುವ ವೀವ್ ಪಾಯಿಂಟ್ ಶಿಥಿಲಾವಸ್ಥೆಯಲ್ಲಿದ್ದು,  ಸರಳುಗಳು ತುಕ್ಕು ಹಿಡಿದು  ಅಪಾಯಕ್ಕೆ ಮುನ್ಸೂಚನೆಯಂತಿದೆ. ವೀವ್ ಪಾಯಿಂಟ್ ಸೈಡ್ ನ ಕಬ್ಬಿಣದ ಸರಳು ಮುರಿದಿದೆ. ಆದರೂ ಸಹ  ಅಬ್ಬಿ ಫಾಲ್ಸ್ ಮನೋಹರ ದೃಶ್ಯ ನೋಡಲು ಪ್ರವಾಸಿಗರು  ವೀವ್ ಪಾಯಿಂಟ್ ಮೇಲೆಯೇ ನಿಂತು ಎಂಜಾಯ್ ಮಾಡುತ್ತಿದ್ದಾರೆ.

ಈಗಾಗಲೇ ಅಬ್ಬಿ ಜಲಪಾತದ ಮುಂದೆ ಇರುವ ತೂಗು ಸೇತುವೆ ಮುರಿದು ಬಿದ್ದಿದ್ದು, ನಿರ್ವಹಣೆ ಇಲ್ಲದೆ  ವೀವ್ ಪಾಯಿಂಟ್ ನ ಕಬ್ಬಣದ ಸರಳುಗಳು ತುಕ್ಕುಹಿಡಿದಿವೆ. ವೀವ್ ಪಾಯಿಂಟ್  ಶಿಥಿಲಗೊಂಡಿದ್ದರೂ ಸಹ ಅದನ್ನ ದುರಸ್ಥಿಪಡಿಸದೆ ಸ್ಥಳೀಯ ಪಂಚಾಯಿತಿ ನಿರ್ಲಕ್ಷ್ಯ ವಹಿಸಿದೆ

ಅಬ್ಬಿ ಜಲಪಾಥ ಕೆ.ನಿಡುಗಣೆ ಗ್ರಾ.ಪಂ ಅಧೀನದಲ್ಲಿದ್ದು. ಪೊಲೀಸ್ ಚೆಕ್​ ಪೋಸ್ಟ್​ ಮೇಲೆ ವೀವ್ ಪಾಯಿಂಟ್ ಕಟ್ಟಲಾಗಿದೆ.  ಜಲಪಾತದ ಅಂಚಿನಲ್ಲೇ ವೀವ್ ಪಾಯಿಂಟ್ ಇದ್ದು, ವೀವ್ ಪಾಯಿಂಟ್ ಮೇಲೆ ಅಪಾಯದ ಅರಿವಿಲ್ಲದೆ ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ. ಹೀಗಾಗಿ ವೀವ್ ಪಾಯಿಂಟ್ ದುರಸ್ತಿಗೆ ಆಗ್ರಹ ಕೇಳಿ ಬಂದಿದ್ದು, ಅನಾಹುತ ಸಂಭವಿಸುವುದಕ್ಕೂ ಮುನ್ನ ಜಿಲ್ಲಾಡಳಿತ ಎಚ್ಚತ್ತುಕೊಳ್ಳಬೇಕಿದೆ.

Key words: Abbey Falls, view point, repair, Dilapidated