ರಾಮನಗರ ಹೆಸರು ಬದಲಾವಣೆಗೆ ಸಿಎಂಗೆ ಮನವಿ ಸಲ್ಲಿಸಿದ ಡಿಕೆಶಿ ನೇತೃತ್ವದ ನಿಯೋಗ

ಬೆಂಗಳೂರು,ಜುಲೈ,9,2024 (www.justkannada.in):  ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡುವಂತೆ ಸಿಎಂ ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿಯಾದ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದ ನಿಯೋಗ ರಾಮನಗರ ಎಂದು ಕರೆಯುವ ಬದಲು ಬೆಂಗಳೂರು ದಕ್ಷಿಣ ಎಂದು ಹೆಸರು ಬದಲಾವಣೆಗೆ ಮನವಿ ಮಾಡಿದರು.

ಡಿಕೆ ಶಿವಕುಮಾರ್ ಸೇರಿ 14 ನಾಯಕರು ಮನವಿ  ಸಲ್ಲಿಸಿದ್ದಾರೆ. ರಾಮನಗರ ಉಸ್ತುವಾರಿ ಸಚಿವ ರಾಮಲಿಂಗರೆಡ್ಡಿ ಶಾಸಕ ಇಕ್ಬಾಲ್ ಹುಸೇನ್, ಮಾಜಿ ಸಂಸದ ಡಿಕೆ ಸುರೇಶ್,  ಮಾಜಿ ಶಾಸಕ ಲಿಂಗಪ್ಪ,  ರಾಜು ಎಂ. ಸಿ ಅಶ್ವಥ್ ,  ರಾಮನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ  ಕೃಷ್ಣಮೂರ್ತಿ ಅವರಿಂದ ಸಹಿ  ಮನವಿ ಪತ್ರಕ್ಕೆ ಸಹಿ ಹಾಕಲಾಗಿದೆ. ಮನವಿ ಸಲ್ಲಿಕೆ ವೇಳೆಯೂ ನಾಯಕರು ಉಪಸ್ಥಿತರಿದ್ದರು.

Key words: change, name, Ramanagara, delegation, CM Siddaramaiah